IISC ವಿದ್ಯಾರ್ಥಿ ಓರ್ವ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ (Bangalore) ಬೆಳಕಿಗೆ ಬಂದಿದೆ. ಬೆಂಗಳೂರಿನ ಯಶವಂತಪುರ ಬಳಿ ಇರುವ ಐ.ಐ.ಎಸ್.ಸಿ. ಯ (IISC) ವಿದ್ಯಾರ್ಥಿ ಅನ್ಮೋಲ್ ಗಿಲ್ (Anmol gill ) ನಾಪತ್ತೆಯಾಗಿರುವ ವಿಧ್ಯಾರ್ಥಿ.

ಐ.ಐ.ಎಸ್.ಸಿ ಯಲ್ಲಿ ಅನ್ಮೋಲ್ ಗಿಲ್ ಎಂ.ಟೆಕ್ (Mtech) ವ್ಯಾಸಂಗ ಮಾಡ್ತಿದ್ದ ಎಂಬ ಮಹಿತಿ ಲಭ್ಯವಾಗಿದೆ.ಈತ ಕಣ್ಮರೆಯಾದ ಮಾಹಿತಿ ತಿಳಿದು ಸಿಸಿಟಿವಿ ಪರಿಶೀಲಿಸಿದಾಗ ಈತ ತಲೆಗೆ ಕ್ಯಾಪ್ ಹಾಕೊಂಡು ಕೊನೆಯಾದಾಗಿ ಹೋಗುತ್ತಿರುವ ದೃಶ್ಯ ಸೆರೆಸಿಕ್ಕಿದೆ.
ಆದ್ರೆ ಈ ವಿದ್ಯಾರ್ಥಿ ಎಲ್ಲೆಗೆ ಹೋಗಿದ್ದಾನೆ, ಯಾರ ಸಂಪರ್ಕದಲ್ಲಿದ್ದ. ಈ ರೀತಿ ನಿಗೂಢವಾಗಿ ಯಾಕೆ ಕಣ್ಮರೆಯಾಗಿದ್ದಾನೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆ ಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ.











