ಮೈಸೂರು: ಪಂಚಮಶಾಲಿ ಮೀಸಲಾತಿ ಹೋರಾಟ ವಿಚಾರಕ್ಕೆ ಎಂಎಲ್ಸಿ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ. ಹೋರಾಟದಿಂದ ಸಮಾಜ – ಸಮಾಜಗಳ ನಡುವೆ ಅಪನಂಬಿಕೆ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸ್ವಾಮೀಜಿಗಳ ಅಗತ್ಯ ಬೇಕಿತ್ತಾ? 2ಎ ಸೇರ್ಪಡೆ ವಿಚಾರವಾಗಿ ಮಾತನಾಡಿದರು.
2ಎ ಮೀಸಲಾತಿ ಈಗಾಗಲೇ ಮುಗಿದುಹೋಗಿದೆ.ಅದರಲ್ಲಿ ಹಲವಾರು ಸಮುದಾಯಗಳು ಈಗಾಗಲೇ ತುಂಬಿಕೊಂಡಿವೆ. ಅದಕ್ಕೆ ಈಗ ಯಾವುದೇ ಮಾನದಂಡ ಕಾಣಿಸುತ್ತಿಲ್ಲ, ಸರ್ಕಾರ ಮೊದಲು ಇದನ್ನು ಸರಿಪಡಿಸಲಿ ಎಂದರು.
ಬೇಕಿದ್ದರೆ ಕುರುಬರನ್ನು ಸೇರಿದಂತೆ ಎಲ್ಲರನ್ನು ಎಸ್ಟಿ ಗೆ ಸೇರಿಸಿಬಿಡಿ. ಮಿಸಲಾತಿ ಪ್ರಮಾಣ ಜಾಸ್ತಿ ಮಾಡಬೇಕಿದೆ. ಪಂಚಮಶಾಲಿ ಹೋರಾಟಕ್ಕೆ ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ತತ್ವ ಸಿದ್ದಂತವಿಲ್ಲದ ಪಕ್ಷ ಎಂದರೆ ಅದು ಬಿಜೆಪಿ. ಅವರಿಗೆ ಯಾವುದಾರರು ತತ್ವ ಸಿದ್ದಂತಾದ ಮೇಲೆ ಇದ್ದಾರಾ.? ಎಲ್ಲಾದಕ್ಕು ಬೆಂಬಲ ನೀಡುವುದು ತಪ್ಪು ಎಂದು ಹಳ್ಳಿಹಕ್ಕಿ ಕಿಡಿಕಾರಿದರು.