ಬಿಗ್ ಬಾಸ್ ಕನ್ನಡ ಸೀಸನ್ 11 , 72ನೇ ದಿನಕ್ಕೆ ಕಾಲಿಟ್ಟಿದೆ ಎಲ್ಲಾ ಕಂಟೆಸ್ಟೆಂಟ್ಗಳು ಕೊಡ ಭರ್ಜರಿಯಾಗಿ ಆಟ ಆಡ್ತಿದ್ದಾರೆ. ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳ ವಿಂಗಡನೆ ಯಾಗಿದ್ದು ಒಂದು ತಂಡದ ಕ್ಯಾಪ್ಟನ್ ಆಗಿ ಗೌತಮಿ ಅವರು ಆಯ್ಕೆಯಾದರೆ ಮತ್ತೊಂದು ತಂಡದ ಕ್ಯಾಪ್ಟನ್ ಆಗಿ ಹನುಮಂತ ಆಯ್ಕೆಯಾಗಿದ್ದಾರೆ.
ಡ್ರಮ್ ಗಳನ್ನು ಉರುಳಿಸುತ್ತ ಇರುವ ಚೀಲಗಳನ್ನು ಸಂಗ್ರಹಿಸಿ ಕೊನೆಯಲ್ಲಿ ಇರಿಸಿರುವ ಮರದ ವಸ್ತುವಿನ ಇರಬೇಕು ಯಾರು ಮೊದಲು ಚೀಲವನ್ನು ಇರಿಸುವ ತಂಡ ಟಾಸ್ಕ್ ಗೆಲ್ಲುತ್ತದೆ.ಈ ಟಾಸ್ಕ್ ನ ಉಸ್ತುವಾರಿಗಳಾಗಿ ತ್ರಿವಿಕ್ರಮ್ ಹಾಗು ರಜತ್ ಕಾರ್ಯ ನಿರ್ವಹಿಸಿದ್ದು , ಗೌತಮಿ ಅವರ ತಂಡದಲ್ಲಿ ಒಂದಿಷ್ಟು ಫೌಲ್ ಆಗಿದ್ದು ಇದೇ ವಿಚಾರವಾಗಿ ಕಂಟೆಸ್ಟೆಂಟ್ಗಳ ನಡುವೆ ಮಾತಿನ ಚಕಮತಿ ಜೋರಾಗಿ ನಡೆಯಿತು.
ಈ ಟಾಸ್ಕ್ ನಲ್ಲಿ ಗೌತಮಿ ಅವರ ತಂಡ ಸೋಲುತ್ತದೆ ಹಾಗೂ ಹನುಮಂತ ಅವರ ತಂಡ ವಿನ್ ಆಗಿ ಕ್ಯಾಪ್ಟನ್ಸಿ ಓಟಕ್ಕೆ ಭವ್ಯ ಅವರನ್ನು ಆಯ್ಕೆ ಮಾಡುತ್ತಾರೆ ಹಾಗು ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನ ಗೌತಮಿ ಹೊರಗಿಡುತ್ತಾರೆ.
ಇನ್ನು ಬಿಗ್ ಬಾಸ್ ಇಂದಿನ ಪ್ರೊಮೋ ಹೊರ ಬಿದ್ದಿದ್ದು, ಚೈತ್ರ ಅವರು ಕಣ್ಣೀರನ್ನು ಹಾಕುತ್ತಾರೆ ಕಾರಣ ಉಸ್ತುವಾರಿ ಆಗುವುದಿಲ್ಲ ಎಂದರು ಕೂಡ ಫೋರ್ಸ್ಫುಲ್ಲಿ ಉಸ್ತುವಾರಿ ಮಾಡುವುದಕ್ಕೆ ಕಳಿಸ್ತೀರ.
ಮತ್ತು ಆಟ ಆಡುವುದಿಲ್ಲ ಎಂದು ನಾಮಿನೇಟ್ ಮಾಡ್ತೀರಾ, ಇದೇ ವಿಚಾರವಾಗಿ ಎಲಿಮಿನೇಷನ್ ಗೆ ಹೋಗಿ ವಾಪಸ್ ಬಂದವಳು ನಾನು ಎಂದು ಬೇಸರವನ್ನ ವ್ಯಕ್ತಪಡಿಸುತ್ತಾರೆ.