ಚನ್ನಪಟ್ಟಣ (Channapattana) ಸೋಲಿನ ನಂತರವೂ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಉತ್ಸಾಹ ಕೊಂಚವೂ ಕಡಿಮೆಯಾದಂತಿಲ್ಲ.ಚುನವಣೆಯಲ್ಲಿ ಗೆಲ್ಲಿಸಿ ನಿಖಿಲ್ ಜನಪ್ರತಿನಿಧಿ ಮಾಡಲು ಸಾಧ್ಯವಾಗಲಿಲ್ಲ. ಆದ್ರೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಮೂಲಕ ಮತ್ತೆ ರಾಜಕೀಯವಾಗಿ ಜೀವಂತವಾಗಿ ಉಳಿಸಲು ದಳಪತಿಗಳು ಮುಂದಾಗಿದ್ದಾರೆ.
ಸದ್ಯ ಜೆಡಿಎಸ್ (Jds) ಪಕ್ಷದ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಖಿಲ್ ಕುಮಾರಸ್ವಾಮಿಯವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ವೇದಿಕೆ ಸನ್ನದ್ಧವಾಗಿದೆ.
ಆದ್ರೆ ಈ ಬೆಳವಣಿಗೆಯಿಂದ ಪಕ್ಷದಲ್ಲಿ ಭುಗಿಲೆಳಬಹುದಾದ ಅಸಮಾಧಾನಗಳ ಬಗ್ಗೆಯೂ ಚಿಂತಿಸಲಾಗಿದೆ. ಆದ್ರೆ ಈಗಾಗಲೇ ಪಕ್ಷದ ಶಾಸಕರು ಮತ್ತು ನಾಯಕರ ಅಭಿಪ್ರಾಯ ಸಂಗ್ರಹ ಮಾಡಿ ಮಾಜಿ ಪ್ರಧಾನಿ ದೇವೇಗೌಡರು (Devegowda) ನಿಖಿಲ್ ಪಟ್ಟಾಭಿಷೇಕಕ್ಕೆ ಅಸ್ತು ಎಂದಿದ್ದಾರಂತೆ.
ಒಂದೋ ಜಿ.ಟಿ.ದೇವೇಗೌಡ ಅಥವಾ ನಿಖಿಲ್. ಈ ಇಬ್ಬರಲ್ಲಿ ಒಬ್ಬರು ರಾಜ್ಯಾಧ್ಯಕ್ಷರಾದರೇ ಸೂಕ್ತ ಎಂದು ಪಕ್ಷದ ಕೆಲವು ನಾಯಕರು ಸಲಹೆ ನೀಡಿದ್ದಾರೆ. ಆದರೆ ನಿಖಿಲ್ ಗೆ ಪಟ್ಟ ಕಟ್ಟಿದರೆ ಪಕ್ಷದಲ್ಲಿನ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.