ಹಾಸನದಲ್ಲಿ ಡಿಸೆಂಬರ್ 5ರಂದು ಸ್ವಾಭಿಮಾನಿ ಸಮಾವೇಶ ನಿಗದಿಯಾಗಿದೆ.( CM Siddaramaiah)ಸಿಎಂ ಸಿದ್ದರಾಮಯ್ಯ ಬೆಂಬಲಿಸಿ ಹಿಂದುಳಿದ ವರ್ಗಗಳ ನಾಯಕರು ಸ್ವಾಭಿಮಾನಿ ಸಮಾವೇಶ ನಡೆಸುತ್ತಿದ್ದಾರೆ.ಆದರೆ ಈ ಸಮಾವೇಶ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡು ಪಕ್ಷ ರಹಿತವಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆಯಲಾಗಿತ್ತು.ಈ ಪತ್ರದ ಬೆನ್ನಲ್ಲೇ ಹೈಕಮಾಂಡ್ ನಾಯಕರ ಜೊತೆಗೂ ಚರ್ಚೆ ನಡೆಸಲಾಗಿತ್ತು.ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,( KPCC President DK Sivakumar,)ಹಳೇ ಮೈಸೂರು ಭಾಗದ ಶಾಸಕರು, ಸಚಿವರ ಸಭೆ ಕರೆದಿದ್ದರು.(Meeting at KPCC office)ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಲಾಯ್ತು.
ಹಾಸನ ಸಮಾವೇಶದ (Hassan Convention)ಕುರಿತು ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಸಿದ್ದು, ಸಭೆಯಲ್ಲಿ ಸಚಿವರಾದ ಚಲುವರಾಯಸ್ವಾಮಿ, ಭೋಸರಾಜು ಭಾಗಿಯಾಗಿದ್ದರು.ಹಾಸನ ಹಾಗೂ ಹಳೆ ಮೈಸೂರು ಭಾಗದ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷರು ಕರೆದ ಸಭೆಗೆ ಪ್ರಮುಖ ಕಾಂಗ್ರೆಸ್ ನಾಯಕರ ಗೈರು ಹಾಜರಾಗಿದ್ದರು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರ್ತಿಸಿಕೊಂಡಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ K.N.ರಾಜಣ್ಣ, H.C ಮಹದೇವಪ್ಪ, ವೆಂಕಟೇಶ್ ಸೇರಿ ಹಲವರು ಗೈರಾಗಿದ್ದರು.
ಅಹಿಂದ ಸಮುದಾಯಗಳನ್ನು ಒಗ್ಗೂಡಿಸಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಆಯೋಜಿಸಿದ್ದ ಸ್ವಾಭಿಮಾನಿ ಸಮಾವೇಶ ಡಿ.ಕೆ ಶಿವಕುಮಾರ್ ಹಿಡಿತಕ್ಕೆ ಹೋಗುತ್ತಿದೆ ಎನ್ನುವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಪರಮಾಪ್ತರು ಸ್ವಾಭಿಮಾನಿ ಸಮಾವೇಶದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ರಾ..? ಅನ್ನೋ ಅನುಮಾನ ಮೂಡಿಸಿದೆ.ಡಿ.ಕೆ ಶಿವಕುಮಾರ್ ರಾಜಕೀಯ ಲೆಕ್ಕಾಚಾರ ನೋಡಿ ಸಿಎಂ ಸಿದ್ದರಾಮಯ್ಯ(CM Siddaramaiah) ಆಪ್ತರು ಗಪ್‌ಚುಪ್ ಆಗಿದ್ದಾರೆ.ಅಹಿಂದ ಸಭೆ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆದು ಪಕ್ಷದ ಹಿಡಿತಕ್ಕೆ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚೆಕ್‌ಮೆಟ್ ನೀಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್( KPCC President DCM DK Shivakumar)ಮಾತನಾಡಿ, ಕಾಂಗ್ರೆಸ್ ಪಕ್ಷದ ಯಶಸ್ಸಿನ ಹಿನ್ನೆಲೆಯಲ್ಲಿ, ಪಕ್ಷ ಸಂಘಟನೆ ಮಾಡಲು ಅನೇಕ ಕಾರ್ಯಕ್ರಮ ರೂಪಿಸಲು ಪಕ್ಷ ತೀರ್ಮಾನ ಮಾಡಿದೆ.ಎಲ್ಲೆಲ್ಲಿ ಕಳೆದುಕೊಂಡಿದ್ದೇವೋ ಅಲ್ಲೇ ಹುಡುಕಬೇಕು. ಪಾರ್ಲಿಮೆಂಟ್‌ಎಲೆಕ್ಷನ್‌ನಲ್ಲಿ ಹಾಸನದಲ್ಲಿ ಶಕ್ತಿ ಬಂದಿತ್ತು.ಈಗ ಲೋಕಲ್ ಬಾಡಿ ಎಲೆಕ್ಷನ್ ಬರುತ್ತೆ . ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾವೇಶ ಮಾಡ್ತೇವೆ.ಸಿಎಂ ಸಿದ್ದರಾಮಯ್ಯ ಹಾಗೂ ನಾನು ಕೃತಜ್ಞತೆ ಸಮಾವೇಶದಲ್ಲಿ ಭಾಗವಹಿಸ್ತೇವೆ.
ಈಗ ಸದ್ಯಕ್ಕೆ ಹಾಸನದಲ್ಲಿ ಸಮಾವೇಶವನ್ನ ರೂಪಿಸಿದ್ದೇವೆ.ನಾನು ಕೂಡ ಇರಲಿಲ್ಲ, ಸಿಎಂ ದೆಹಲಿಯಲ್ಲಿದ್ರು. ಹೀಗಾಗಿ ನಮ್ಮ ಶಾಸಕರು ಎಲ್ಲಾ ತಯಾರಿ ಮಾಡಿದ್ದಾರೆ.. ಡಿಸೆಂಬರ್ 5ರಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ಮಾಡ್ತೇವೆ. ನಮಗೆ ಬೆಂಬಲ ಕೊಡಲು ಕೆಲವರು ಮುಂದೆ ಬಂದಿದ್ದಾರೆ. ಸಂವಿಧಾನ ರಕ್ಷಣೆ ಮಾಡೋರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದ್ದಾರೆ.