ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ವಿಚಾರವಾಗಿ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಕರೆದಿರುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದು, ಇವತ್ತು ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಬಳ್ಳಾರಿ ಬಾಣಂತಿಯರ ಸಾವಿನ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಬಳ್ಳಾರಿಯಲ್ಲಿ ಆಗಿರುವ ದುರ್ಘಟನೆಗೆ ಏನು ಕಾರಣ ಅನ್ನೋ ಬಗ್ಗೆ ಎಲ್ಲಾ ಆಯಾಮಗಳಲ್ಲೂ ವಿಚಾರಗಳನ್ನು ಚರ್ಚೆ ಮಾಡುತ್ತೇವೆ. ಮುಂದಿನ ಕ್ರಮದ ಬಗ್ಗೆಯೂ ಸಿಎಂ ನೇತೃತ್ವದಲ್ಲಿ ಚರ್ಚೆ ಮಾಡುತ್ತೇವೆ ಎಂದಿರುವ ಸಚಿವರು,ಐವಿ ದ್ರಾವಣದಿಂದಲೇ ಸಾವು ಅನ್ನೋದು ಅಧಿಕೃತವಾಗಿಲ್ಲ. ಈ ಹಿಂದೆ ಅನುಮಾನ ಬಂದಾಗ ಟೆಸ್ಟ್ ಮಾಡಿಸಿದ್ವಿ, ಅದರಲ್ಲಿ ಕೆಲವು ಸ್ಯಾಂಪಲ್‌ನಲ್ಲಿ ನೆಗೆಟಿವ್ ಬಂದಿತ್ತು. ಆ ಬಳಿಕಕಂಒನಿಯವರು ಕೊಲ್ಕತ್ತಾ ಲ್ಯಾಬ್‌ಗೆ ಸ್ಯಾಂಪಲ್ ಕಳ್ಸಿದ್ರು. ಅಲ್ಲಿಂದ ಬಳಸಬಹುದು ಎಂಬ ವರದಿ ಬಂದಿತ್ತು ಎಂದಿದ್ದಾರೆ.
ವರದಿಗಳಲ್ಲಿ ಬೇರೆ ಬೇರೆ ರೀತಿಯ ರಿಪೋರ್ಟ್ ಬಂದ ಬಳಿಕ ಒಂದು ಟೆಕ್ನಿಕಲ್ ಕಮಿಟಿ ಮಾಡಿ ಟೆಸ್ಟ್ ಮಾಡಿಸಿದ್ದಿ. ಆಗ ಗ್ಲೂಕೋಸ್ ಬಳಸುವುದಕ್ಕೆ ಅವಕಾಶ ಕೊಟ್ಟಿದ್ದೆವು. ಈಗ ಬಳಕೆ ಮಾಡಿರುವಂತಹ ಬ್ಯಾಚ್‌ನಲ್ಲಿ ಏನಾದರೂ ಸಮಸ್ಯೆ ಆಗಿದ್ಯಾ..? ಇಲ್ವಾ..? ಅನ್ನೋದನ್ನ ತನಿಖೆ ಮಾಡಿ ನೋಡುವುದು ಮುಖ್ಯ. ಆ ಸ್ಯಾಂಪಲ್‌ಗಳನ್ನೂ ಲ್ಯಾಬ್‌ಗೆ ಕಳಿಸಿದ್ದೇವೆ. ನಮ್ಮ ತಜ್ಞರು ತಂಡ ಘಟನೆ ಬಳಿಕ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ. ವೈದ್ಯರ ನ್ಯೂನ್ಯತೆಗಳು ಏನಾದರೂ ಇದೆಯಾ ಅನ್ನೋದನ್ನ ಚೆಕ್ ಮಾಡಿದ್ದೇವೆ ಎಂದಿದ್ದಾರೆ.
ಮೊದಲ ವರದಿಯಲ್ಲಿ ರಿಂಗಲ್ ಲ್ಯಾಕ್ಟೇಟ್ ಬಗ್ಗೆ ಏನೂ ಸಮಸ್ಯೆ ಇಲ್ಲ ಎಂಬುದು ತಿಳಿದು ಬಂದಿತ್ತು. ಇದೀಗ ಮತ್ತೊಂದು ಟೆಸ್ಟ್ ಮಾಡಲು ಲ್ಯಾಬ್‌ಗೆ ಕಳಿಸಿದ್ದೇವೆ. ಆ ವರದಿ ಬರಲು 8 ರಿಂದ 9 ದಿನ ಆಗಲಿದೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ. ಐವಿ ದ್ರಾವಣ ( ಗ್ಲೂಕೋಸ್ ) ಬಗ್ಗೆ ಶಂಕೆ ಇರುವ ಕಾರಣಕ್ಕಾಗಿ ತಡೆ ಹಿಡಿದಿದ್ದೇವೆ. ಯಾಕೆಂದರೆ ಒಂದು ಜೀವಕ್ಕೆ ಹಾನಿ ಆಗಬಾರದು, ಜೀವದ ವಿಚಾರದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಬಾರದು.ಹಾಗಾಗಿ ರಾಜ್ಯಾದ್ಯಂತ ಎಲ್ಲಿಯೂ ಉಪಯೋಗ ಮಾಡಬಾರದು ಅಂತ ಸೂಚನೆ ಕೊಟ್ಟಿದ್ದೇವೆ. ಮುಂದೆ ಏನು ಮಾಡಬೇಕು ಅನ್ನೋದನ್ನು ರಿಪೋರ್ಟ್ ಬಂದ ಬಳಿಕ ತೀರ್ಮಾನ ಮಾಡಲಾಗುತ್ತದೆ. ಇಂದಿನ ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡ್ತೇವೆ ಅಂತಾ ತಿಳಿಸಿದ್ದಾರೆ.