ಮೈಸೂರು: ಮುಡಾ ಹಿಂದಿನ ಆಯುಕ್ತ ಕಾಂತರಾಜು ವಿಚಾರಣೆ ಮಾಡಿದ್ದಾರೆ ಲೋಕಾಯುಕ್ತ ಎಸ್‌ಪಿ ಉದೇಶ್. ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ಎದುರು ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದ ಕಾಂತರಾಜು ಮಧ್ಯಾಹ್ನ 12.50ಕ್ಕೆ ವಿಚಾರಣೆ ಮುಗಿಸಿ ಹೊರಕ್ಕೆ ಬಂದಿದ್ದಾರೆ.
ಲೋಕಾಯುಕ್ತ ವಿಚಾರಣೆ ಮುಗಿಸಿ ಹೊರ ಬಂದ ಮುಡಾ ಮಾಜಿ ಆಯುಕ್ತ ಕಾಂತರಾಜು ಮಾಧ್ಯಮಗಳ ಜೊತೆಗೆ ಮಾತನಾಡಿ, ನನ್ನ ಅವಧಿಯ ಮುಡಾ ವ್ಯವಹಾರಗಳ ಬಗ್ಗೆ ವಿಚಾರಣೆಗೆ ಕರೆದಿದ್ರು, 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ಪಾರ್ವತಿಯವರು ಪಡೆದಿದ್ದ ಭೂಮಿ ಪರಿಹಾರದ ಬಗ್ಗೆ ವಿವರ ಕೇಳಿದ್ರು ಎಂದಿದ್ದಾರೆ.
2017ರ ಡಿಸೆಂಬರ್‌ನಲ್ಲಿ ಪ್ರಾಧಿಕಾರದ ಸಭೆಯಲ್ಲಿ ಅಭಿವೃದ್ಧಿ ಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೆವು. ಇದೆಲ್ಲದರ ಬಗ್ಗೆ ಲೋಕಾಯುಕ್ತರು ವಿಚಾರಣೆ ಮಾಡಿದ್ದಾರೆ. ಅಂದು ಸಭೆಯಲ್ಲಿ ಆಗಿದ್ದ ತೀರ್ಮಾನದ ಸಂಬಂಧ ಕಡತದಲ್ಲಿ ಏನು ಇದೆಯೊ ಅದನ್ನು ತನಿಖಾಧಿಕಾರಿ ಮುಂದೆ ಹೇಳಿದ್ದೇನೆ. ತನಿಖೆ ನಡೆಯುತ್ತಿರುವ ಕಾರಣಕ್ಕೆ ಹೆಚ್ಚು ಮಾಹಿತಿ ಹೇಳಲಾರೆ ಎಂದಿದ್ದಾರೆ.
ಮುಡಾ ಕೇಸ್; ಸಿಎಂ ತಪ್ಪು ಸಾಬೀತಾದ್ರೆ ಜೀತಾ ಮಾಡುವ ಸವಾಲ್..
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲೆ ಮತ್ತೆ ಕೇಸ್ ವಿಚಾರವಾಗಿ ಶಾಸಕ ಶಿವಲಿಂಗೇಗೌಡ ಮಾತನಾಡಿ, ದೇವರಾಜ ಎನ್ನುವವರು ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ್‌ಗೆ ಜಮೀನು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಬಾಮೈದ ಅವರ ತಂಗಿಗೆ ಉಡುಗೊರೆ ಕೊಟ್ಟಿದ್ದಾರೆ . ಏನಾದರೂ ಮೋಸ ಮಾಡಿದ್ರೆ ದೇವರಾಜು ಮೇಲೆ ಕೇಸ್ ಹಾಕ್ಬೇಕು. ಸಿದ್ದರಾಮಯ್ಯ ಮೇಲೆ ಹೇಗೆ ಕೇಸ್ ಹಾಕಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರು ಮೋಸ ಮಾಡಿದ್ದಾರ..? ಸೈಟ್ ಕೊಟ್ಟಿರೋದು ಮೂಡಾದವರು. ಅವರ ಮೇಲೆ ಯಾರು ಮಾತಾಡ್ತಿಲ್ಲ. ಸೈಟ್ ಕೊಟ್ಟಾಗ ಮೂಡಾ ಅಧ್ಯಕ್ಷನಾಗಿ ಇದ್ದವನು ಬಿಜೆಪಿಯವರು. ಸಿದ್ದರಾಮಯ್ಯ ಅವರದ್ದು ಒಂದೇ ಒಂದು ಪೈಸೆ ತಪ್ಪಿಲ್ಲ. ವಕ್ಫ್ ವಿಚಾರ ನಿಜಾಮರ ಕಾಲದಿಂದಲೂ ಇದೆ.. ಈಗ ಸಿಎಂ ಸಿದ್ದರಾಮಯ್ಯ ಕೂಡ ರೈತರನ್ನ ಒಕ್ಕಲೆಬ್ಬಿಸಲ್ಲ ಎಂದಿದ್ದಾರೆ.
ಬಿಜೆಪಿ ನಾಯಕರು ಯಾಕೆ ತಮಟೆ ಬಡಿದುಕೊಳ್ತಿದ್ದಾರೆ..? ಒಂದು ಸಮಾಜದ ಮೇಲೆ ಕೆಟ್ಟ ಹೆಸರು ತರಲು ಗಿಮಿಕ್ ಮಾಡ್ತಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇನೆ ಎಂದು ಹೇಳಿದ್ರು. ಮಾಡಿದ್ರಾ..? ಅದರ ಬಗ್ಗೆ ಮಾತನಾಡಬೇಕು. ಮುಡಾದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿದ್ದು ಸಾಬೀತಾದರೆ ನಾನು ಜೀತಾ ಮಾಡ್ತೇನೆ ಎಂದು ಸವಾಲು ಹಾಕಿದ್ದಾರೆ.