2010 ರಲ್ಲಿ ಭಾರತ ತೊರೆದಿದ್ದ ಲಲಿತ್ ಮೋದಿ (Lalit modi) ಬರೋಬ್ಬರಿ 14 ವರ್ಷಗಳ ಬಳಿಕ ತಾವು ಯಾವ ಕಾರಣಕ್ಕೆ ಭಾರತ ತೊರೆದಿದ್ದಾಗಿ ಕಾರಣ ಬಹಿರಂಗ ಪಡಿಸಿದ್ದಾರೆ. ತಮ್ಮ ವಿರುದ್ಧ ಯಾವುದೇ ಕೇಸ್ ಗಳು ಇಲ್ಲ ಅಥವಾ ಯಾವ ಆರೋಪಗಳಿಗು ಹೆದರಿ ದೇಶ ತೊರೆದಿಲ್ಲ. ಆದ್ರೆ ಕೊಲೆ ಬೆದರಿಕೆಗೆ ಹೆದರಿ ದೇಶ ತೊರೆದಿದ್ದಾಗಿ ಹೇಳಿಕೊಂಡಿದ್ದಾರೆ.
ಹೌದು ಭೂಗತ ದೊರೆ ದಾವೂದ್ ಇಬ್ರಾಹಿಂ (Dawood Ibrahim) ತಮಗೆ ಜೀವ ಬೆದರಿಕೆಗೆ ಹಾಕಿದ ಕಾರಣ, ಅನಿವಾರ್ಯವಾಗಿ ತಾವು ದೇಶ ಬಿಡಬೇಕಾಯಿತು ಎಂದು ಇತ್ತೀಚಿನ ಸಂದರ್ಶನದಲ್ಲಿ ಲಲಿತ್ ಮೋದಿ ಹೇಳಿಕೊಂಡಿದ್ದಾರೆ.

ನನಗೆ ಮೇಲಿಂದ ಮೇಲೆ ಕೊಲೆ ಬೆದರಿಕೆಗಳು ಬರಲು ಶುರುವಾದ ಕಾರಣ ನಾನು ಭಾರತ ತೊರೆಯಬೇಕಾಯಿತು ಎಂದು ಲಲಿತ್ ಮೋದಿ ಹೇಳಿದ್ದಾರೆ. ದಾವೂದ್ ಇಬ್ರಾಹಿಂ ಐಪಿಎಲ್ (IPL fixing) ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ನನ್ನ ಸಹಕಾರ ಕೇಳಿದ್ದ. ಆದ್ರೆ ನಾನು ಐಪಿಎಲ್ ನಲ್ಲಿ ಪಂದ್ಯಗಳ ಫಿಕ್ಸಿಂಗ್ ಗೆ ಒಪ್ಪಲಿಲ್ಲ ಎಂದಿದ್ದಾರೆ. ಇದರ ಜೊತೆಗೆ ತಾವು ಯಾವುದೇ ದಿನ ಭಾರತಕ್ಕೆ ಮರಳಬಹುದು ಹೇಳಿದ್ದಾರೆ.






