ಇಂದು ಬಿಗ್ ಬಾಸ್ ಮನೆಯ ಬದಲು ಬಿಗ್ ಬಾಸ್ ಸಾಮ್ರಾಜ್ಯ ಸೃಷ್ಟಿಯಾಗಿದೆ. ಈ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರದ್ದೇ ದರ್ಬಾರ್, ಅಂದ್ರೆ ಅವರೇ ಈ ಸಾಮ್ರಾಜ್ಯದ ಮಹಾರಾಜ.
ಉಳಿದ ಸ್ಪರ್ಧಿಗಳು ಸಾಮ್ರಾಜ್ಯದ ಪ್ರಜೆಗಳು,ಮಹಾರಾಜ ಹೇಳಿದ ಕೆಲಸವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,ಇಲ್ಲವಾದಲ್ಲಿ ಶಿಕ್ಷೆ ಕಂಡಿತ. ಚೈತ್ರ ಅವರ ಬಾಯಿಗೆ ಆಲೂಗಡ್ಡೆಯಿಡಿಯಂದು ಮಂಜು ಹೇಳುತ್ತಾರೆ ಇದಕ್ಕೆ ಉಳಿದ ಪ್ರಜೆ ಆಲೂಗಡ್ಡೆ ಇಡುತ್ತಾರೆ. ಹಾಗೂ ಬಸ್ಕಿ ಹೊಡಿರಿ ಎಂದರೆ ಹೊಡೆಯಲೇಬೇಕು ಮಧ್ಯಾಹ್ನದ ಉಪಹಾರ ಮಾಡುವಂತಿಲ್ಲ ಎಂದರೆ ಮಾಡಬಾರದು..
ಈ ಸಾಮ್ರಾಜ್ಯದಲ್ಲಿ ಯಾರಪ್ಪಾ ಮಹಾರಾಜ ಎನ್ನುವ ಕನ್ಫ್ಯೂಶನ್ ಸದ್ಯಕ್ಕೆ ಶುರುವಾಗಿದೆ..ಮಂಜು ಹನುಮಂತನನ್ನು ಕರೆದರೆ,ಅವರನ್ನೇ ಇಲ್ಲಿ ಬರಲು ಹೇಳು ಎಂಬ ಉತ್ತರವನ್ನು ಹನುಮಂತ ನೀಡಿದ್ದಾರೆ..
ಬಿಗ್ ಬಾಸ್ ನಿಮ್ಮಕಿಂತ ರಾಜನ ಕಾಟನೆ ಹೆಚ್ಚಾಗಿದೆ ಎಂದು ಹನುಮಂತ ಹೇಳ್ತಾರೆ.ಒಟ್ಟಿನಲ್ಲಿ ಧನರಾಜ್ ಹಾಗೂ ಹಳ್ಳಿ ಹೈದನ ಕಾಮಿಡಿ ಇಂದಿನ ಎಪಿಸೋಡ್ ನಲ್ಲಿ ಹೆಚ್ಚಿರಲಿದೇ..