ಬಿಗ್ ಬಾಸ್ ಕನ್ನಡ ಸೀಸನ್ 11, 9ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಬಿಗ್ ಬಾಸ್ ನಿನ್ನೆಯ ಎಪಿಸೋಡ್ ನಲ್ಲಿ ನಾಮಿನೇಟ್ ಆದವರಲ್ಲಿ ಕೊನೆಗೆ ಉಳಿದವರು ಚೈತ್ರ ಹಾಗೂ ಧರ್ಮ ಕೀರ್ತಿರಾಜ್. ಇವರಿಬ್ಬರಲಿ ಚೈತ್ರ ಅವರು ಮನೆಯಿಂದ ಹೊರ ಹೋಗ್ಬೇಕು ಎಂಬ ಒಪೀನಿಯನ್ ಸಾಕಷ್ಟು ಕಂಟೆಸ್ಟೆಂಟ್ ಗಳಿಗೆ ಹಾಗೂ ಪ್ರೇಕ್ಷಕರಲ್ಲೂ ಕೂಡ ಇತ್ತು ಆದರೆ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿರೋದು ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಬಿಗ್ ಬಾಸ್ ಮನೆಯಲ್ಲಿ ಸಾಫ್ಟ್ ಹಾಗೂ ಒಳ್ಳೆಯ ಮನಸ್ಸಿರುವ ವ್ಯಕ್ತಿಯಂತೆ ಫೇಮಸ್ ಅಂದ್ರೆ ಧರ್ಮ ಕೀರ್ತಿರಾಜ್.

ಇನ್ನು ಮಂಜು ಅವರು ಕ್ಯಾಪ್ಟನ್ ಆದಕಾರಣ ಮಂಜು ಅವರ ಫ್ರೆಂಡ್ಸ್ ಬಿಗ್ ಬಾಸ್ ಗೆ ಕೇಕ್ ಕಳಿಸಿ ಮಂಜು ಅವರ ಬಳಿ ಕಟ್ ಮಾಡಿಸಿ ಎಂದು ಹೇಳಿರುತ್ತಾರೆ, ಇದನ್ನು ಬಿಗ್ ಬಾಸ್ ಒಪ್ಪಿಕೊಂಡು, ಮಂಜು ಅವರು ನಿನ್ನೆ ಖುಷಿಯಲ್ಲಿ ಮಾಡುತ್ತಾರೆ.
ಇನ್ನು ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರಬಿದ್ದಿದ್ದು ಇಂದಿನ ಕ್ರೋಮೋ ದಲ್ಲಿ ಬಿಗ್ ಬಾಸ್ ಮನೆಯ ಬದಲು ಬಿಗ್ ಬಾಸ್ ಸಾಮ್ರಾಜ್ಯ ಸೃಷ್ಟಿಯಾಗಿದೆ. ಈ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರದ್ದೇ ದರ್ಬಾರ್, ಅಂದ್ರೆ ಅವರೇ ಈ ಸಾಮ್ರಾಜ್ಯದ ಮಹಾರಾಜ.

ಉಳಿದೆಲ್ಲಾ ಕಂಟೆಸ್ಟೆಂಟ್ಗಳು ಪ್ರಜೆಗಳಾಗಿರುತ್ತಾರೆ ಹಾಗೂ ಮಂಜು ಅವರ ಹೇಳಿದ ಆಜ್ಞೆಯನ್ನು ಪಾಲಿಸಲೇಬೇಕು. ಅತಿ ಹೆಚ್ಚು ಮಾತನಾಡುವ ಚೈತ್ರ ಅವರ ಬಾಯಿಗೆ ಆಲೂಗಡ್ಡೆಯಿಡಿಯಂದು ಮಂಜು ಹೇಳುತ್ತಾರೆ ಇದಕ್ಕೆ ಉಳಿದ ಪ್ರಜೆ ಆಲೂಗಡ್ಡೆ ಇಡುತ್ತಾರೆ. ಹಾಗೂ ಬಸ್ಕಿ ಹೊಡಿರಿ ಎಂದರೆ ಹೊಡೆಯಲೇಬೇಕು ಮಧ್ಯಾಹ್ನದ ಉಪಹಾರ ಮಾಡುವಂತಿಲ್ಲ ಎಂದರೆ ಮಾಡಬಾರದು.

ಈ ಆಜ್ಞೆಯನ್ನ ಪಾಲಿಸದಿದ್ದರೆ ಪ್ರಜೆಗಳಿಗೆ ಶಿಕ್ಷೆ ಅಂತೂ ಖಂಡಿತ. ಒಟ್ಟಿನಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಟಾಸ್ಕ್ ಯಾವ ರೀತಿ ನಡೆಯಲಿದೆ ಯಾವ ಕಂಟೆಸ್ಟೆಂಟ್ ಹೇಗೆ ಪರ್ಫಾರ್ಮ್ ಮಾಡ್ತಾರೆ ಎಂಬುದನ್ನ ಕಾದು ನೋಡಬೇಕು.










