
ಮಂಡ್ಯ:ಟೋಲ್ ಕಟ್ಟದೇ ಕೈ ಮುಖಂಡನೋರ್ವ ದರ್ಪ ಮೆರೆದಿದ್ದು, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜರುಗಿದೆ.ಬೆಂಗಳೂರಿಗರಿಗೆ ಪವರ್ ಶಾಕ್: ಇಂದು ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್!.

ಕಾಂಗ್ರೆಸ್ ಪಕ್ಷದ ಸಮಿತಿ ಒಂದರ ಪದಾಧಿಕಾರಿ ಬೋರ್ಡ್ ಹಾಕಿದ ಕಾರು ನಿನ್ನೆ ಮದ್ಯಾಹ್ನ, ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್‌ಗೆ ಬಂದಿದೆ.ಮೈಸೂರು ಕಡೆಗೆ ಹೊರಟಿದ್ದ ಕಾರು ಚಾಲಕ ಮತ್ತು ಅದರ ಒಳಗಡೆ ಇದ್ದ ಪ್ರಯಾಣಿಕರು ಟೋಲ್ ಕಟ್ಟಲು ನಿರಾಕರಿಸಿದ್ದಾರೆ.
ನಂತರ ಯಾಕೆ ಕಾರನ್ನು ಬಿಡುತ್ತಿಲ್ಲ ಎಂದು ಪ್ರಶ್ನಿಸಿ ಕೈ ಮುಖಂಡ ಕಾರಿನಿಂದ ಇಳಿದು ಅವಾಜ್ ಹಾಕಿದ್ದಾನೆ. ನಾನು ಕಾಂಗ್ರೆಸ್ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಟೋಲ್ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆ ಕೆಳಗೆ ಇಳಿದು ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ.
ಕೈ ಮುಖಂಡ ಹಾಗೂ ಉಳಿದ ಪ್ರಯಾಣಿಕರು.
KA 06 M 8164 ನಂಬರ್ನ ಕಾರಿನಲ್ಲಿ ಮೈಸೂರು ಕಡೆಗೆ ಹೊರಟಿದ್ದ ವ್ಯಕ್ತಿ, ಕಾಂಗ್ರೆಸ್ ಪಕ್ಷದ ಕಮಿಟಿ ಒಂದರ ಪದಾಧಿಕಾರಿ ಎಂದು ಕಾರಿನಲ್ಲಿ ಅಳವಡಿಸಲಾಗಿದ್ದ ನಾಮಫಲಕದ ಮೂಲಕ ಸ್ಪಷ್ಟವಾಗಿದೆ. ಟೋಲ್ ಹಣ ಕಟ್ಟಿದರೆ ಮಾತ್ರ ಗೇಟ್ ತೆರೆಯಲಾಗುವುದು ಎಂದು ಸಿಬ್ಬಂದಿಗಳು ಹೇಳಿದ್ದಕ್ಕೆ ಕಿಡಿಕಾರಿದ ಕೈ ಮುಖಂಡ ಹಾಗೂ ಉಳಿದ ಪ್ರಯಾಣಿಕರು, ಕಾರಿನಿಂದ ಕೆಳಗಿಳಿದು ಏಕಾಏಕಿ ಅವಾಜ್ ಹಾಕಿದ್ದಾರೆ. ನೀವು ಯಾರಾದರೆ ನಮಗೇನು, ಹಣ ಕೊಡಿ ಎಂದು ಪಟ್ಟು ಹಿಡಿದಿದ್ದಕ್ಕೆ ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆಗೈದಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










