ರಾಜ್ಯದಲ್ಲಿ ಉಪ ಚುನಾವಣೆ (Bypoll) ಮುಗಿದ ನಂತರವೂ ರಾಜಕೀಯ ಮೇಲಾಟಗಳು ಮುಂದುವರಿತಾನೆ ಇದೆ. ಉಪ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಕಾಂಗ್ರೆಸ್ (Congress) ಪಾಳಯದಿಂದ ಆಪರೇಷನ್ ಕಮಲ (Operation lotus) ಬಾಂಬ್ ಸಿಡಿಸಲಾಯ್ತು. ಈ ಹಿನ್ನೆಲೆಯಲ್ಲಿ CM ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ, 100 ಕೋಟಿ ಆಫರ್ ಕೊಡ್ತಿದೆ ಎಂದು ಸಿಎಂ ಹಾದಿಯಾಗಿ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದು ಹೈಕಮಾಂಡ್ ಗೂ ಟೆನ್ಶನ್ ಕೊಟ್ಟಿದೆ. ಹೀಗಾಗಿ ಖುದ್ದು ಸಿಎಂ ಗೆ ದೆಹಲಿಗೆ (Delhi) ಬರುವಂತೆ ಸೂಚನೆ ನೀಡಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ CM ಸಿದ್ದರಾಮಯ್ಯ ಇಂದು ರಾತ್ರಿ ದೆಹಲಿಗೆ ತೆರಳುತ್ತಿದ್ದಾರೆ. ನಾಳೆ ಬೆಳಗ್ಗೆ KMF ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಸಿದ್ದರಾಮಯ್ಯ, ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ.
ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳ ಚುನಾವಣೆಯಲ್ಲೂ ಸದ್ದು ಮಾಡಿದ ಮುಡಾ ಪ್ರಕರಣ (MUDA scam) , ವಕ್ಫ್ ವಿವಾದ ಮತ್ತು ರಾಜ್ಯದ 3 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಕುರಿತಂತೆ ಸಿದ್ದು ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.