ವಿಜಯನಗರದ ಕಾಂಗ್ರೆಸ್ ಶಾಸಕ ಗವಿಯಪ್ಪ ಅಸಮಾಧಾನಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ. ಕೆ ಶಿವಕುಮಾರ್ ಮಾತನಾಡಿದ್ದು, ಕೆಲವರು ಅವರ ಅವರ ಲೆಕ್ಕಾಚಾರ ಹೇಳಬಹುದು ಅಷ್ಟೇ. ಅದಕ್ಕೊಂದು ಪ್ರಕ್ರಿಯೆ ಇದೆ. ನೂರು ಕೋಟಿ ಕೇಳುತ್ತಾರೆ. ಹಾಗಂತ ನೂರು ಕೋಟಿ ಕೋಡೋದಕ್ಕೆ ಆಗುತ್ತಾ..? ನೂರು, ಐವತ್ತು ಕೋಟಿ ಕೋಡೋಕೆ ಆಗಲ್ಲ. ಒಂದೊಂದು ಕ್ಷೇತ್ರಕ್ಕೆ ಇಷ್ಟು ಕೊಡಬೇಕು ಅಂತ ಇದೆ, ಅದನ್ನ ಕೊಡುತ್ತೇವೆ ಎಂದು ಹೇಳಿದ್ದಾರೆ.
ಶಾಸಕ ಗವಿಯಪ್ಪ ಅನುದಾನ ಅಸಮಾಧಾನದ ಬಗ್ಗೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಯೋಜನೆ ನಿಲ್ಲಿಸಿಲ್ಲ. ಗ್ಯಾರಂಟಿಗಳಿಗೆ ಅನುದಾನ ಬಳಸಿಕೊಂಡಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆಗಿದೆ ಅದನ್ನ ಸಿಎಂ ಸರಿಪಡಿಸುತ್ತಾರೆ. ಅನುದಾನದಲ್ಲಿ ಸ್ವಲ್ಪ ವೇರಿಯಶನ್ ಆಗಿರಬಹುದು ಆದ್ರೆ ಯಾವುದೇ ಕೊರತೆಯಿಲ್ಲ ಎಂದಿದ್ದಾರೆ.
ನಮ್ಮ ಶಾಸಕರಿಗೆ ಅಭಿವೃದ್ಧಿ ಕೆಲಸ ಮಾಡಲು ಉತ್ಸಾಹ ಇರೋದ್ರಿಂದ ಅನುದಾನ ಕೇಳಿದ್ದಾರೆ. ಸಿಎಂ ಸಿದ್ದರಾಮುಯ್ಯ ಅದರು ಈ ಬಗ್ಗೆ ಮಾತನಾಡ್ತಾರೆ. 224 ಶಾಸಕರಿದ್ದಾರೆ ಎಲ್ಲರಿಗೂ ಸರಿಸಮಾನವಾದ ಅನುದಾನ ಹಂಚಬೇಕು. ಹೊಸದಾಗಿ ಶಾಸಕರಾದಾಗ ಜನರ ಒತ್ತಡ ಇರುತ್ತೆ. ಕ್ಷೇತ್ರಕ್ಕೆ ಕೆಲಸ ಮಾಡಬೇಕು ಅನ್ನೊದು ಇರುತ್ತೆ. ಆದ್ರೆ ಈಗ ಮೊದಲ ಹಾಗೇ ಸಮಸ್ಯೆ ಏನಿಲ್ಲ ಎಂದು ಹೇಳಿದ್ದಾರೆ.
ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಗವಿಯಪ್ಪ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕ ಸಿಟಿ ರವಿ ಮಾತನಾಡಿ, ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಬೇಕಾ..? ಇದೇನೂ ಹೊಸದಲ್ಲ. ಅದಕ್ಕಾಗಿ ಬಡವರ ಅನ್ನವನ್ನೂ ಕಿತ್ತುಕೊಳ್ಳಲು ಹೊರಟಿದ್ದಾರೆ. ಅದರಲ್ಲೂ ಕೂಡಾ ಜಾತಿ ಹುಡುಕಿ ಬಿಪಿಎಲ್ ಕಾರ್ಡ್ ಕಡಿತ ಮಾಡಿದ್ದಾರಂತೆ. ಈ ಆಪಾದನೆ ನಿಜ ಆಗಿದ್ದರೆ ಅದು ಘೋರ ಅನ್ಯಾಯ ಆಗುತ್ತದೆ. ಜಾತಿ ಮೇಲೆ ಕಾರ್ಡ್ ತೆಗೆದಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ಹೇಳಕ್ಕಾಗಲ್ಲ, ಈ ಸರ್ಕಾರ ಎಲ್ಲದರಲ್ಲೂ ಜಾತಿ ಹುಡುಕುತ್ತಿದೆ ಎಂದಿದ್ದಾರೆ.