• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಚಿವ ಸ್ಥಾನ ಸಿಗದೆ ಸಿಟ್ಟು ಪ್ರದರ್ಶನ ಮಾಡಿದ ಮಳವಳ್ಳಿ ಶಾಸಕ..

ಪ್ರತಿಧ್ವನಿ by ಪ್ರತಿಧ್ವನಿ
November 19, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಮಂಡ್ಯ :ರಾಜಕಾರಣದಲ್ಲಿ ಶಾಸಕ ನರೇಂದ್ರ ಸ್ವಾಮಿ ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.ಹಣೆ ಬರಹ ಸರಿಲ್ಲದ ಕಾರಣಕ್ಕೆ ಸಚಿವ ಸ್ಥಾನ ಕೈ ತಪ್ಪಿದೆ. ಕಾಂಗ್ರೆಸ್‌ ಪಕ್ಷದಿಂದಲ್ಲೇ ಅನ್ಯಾಯ ಆಗ್ತಿದೆ ಎಂದು ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಬೇಸರ ಹೊರ ಹಾಕಿದ್ದಾರೆ.

ADVERTISEMENT

ಸಚಿವ ಸ್ಥಾನ ಬೇಡಿಕೆ ಅಲ್ಲ, ನನ್ನ ಹಕ್ಕು, ನನಗೆ ಯೋಗ್ಯತೆ, ಅರ್ಹತೆ, ಸೀನಿಯರಿಟಿ ಇಲ್ವಾ..? ಎಂದು ಪ್ರಶ್ನಿಸಿದ್ದು, ನನ್ನ ಹಕ್ಕನ್ನು ಪ್ರಬಲವಾಗಿ ಪ್ರತಿಪಾದನೆ ಮಾಡುವ ದಿನ ಹತ್ತಿರ ಬರ್ತಿದೆ ಎಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗತ್ತೆ ಅನ್ನೋ ಚರ್ಚೆಗಳ ನಡುವೆ ಮಂಡ್ಯದಲ್ಲಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ನಾನು ಸಚಿವ ಸ್ಥಾನ ಕೇಳ್ತಿದ್ದೇನೆ, ನಮ್ಮ ಹೈಕಮಾಂಡ್ ಯಾವಾಗ ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಸಿಎಂ ಕೂಡ ನನ್ನ ಕ್ಷೇತ್ರದಲ್ಲಿ ಎರಡ್ಮೂರು ಬಾರಿ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಕಾದು ನೋಡಬೇಕು. ಸಚಿವ ಸ್ಥಾನ ಬೇಡಿಕೆ ಅಲ್ಲ, ನನ್ನ ಹಕ್ಕು.ಮಂಡ್ಯದಲ್ಲಿ ಕಾಂಗ್ರೆಸ್‌ನಲ್ಲಿ ಸೀನಿಯರ್ ಲೀಡರ್ ಇದ್ದೇನೆ. ಹಕ್ಕು ಇಲ್ವಾ..? ಎಂದು ಪ್ರಶ್ನಿಸಿದ್ದಾರೆ.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅಣ್ಣತಮ್ಮಂದಿರ ರೀತಿ ಇದ್ದೇವೆ. ನನಗೆ ಯೋಗ್ಯತೆ, ಅರ್ಹತೆ, ಸೀನಿಯರಿಟಿ ಇದೆ. ವಿದ್ಯಾರ್ಥಿ ದೆಸೆಯಿಂದಲೇ ನಾನು ಕಾಂಗ್ರೆಸ್ ಕಟ್ಟಿದವನು. ಇವತ್ತಿನ ಮಟ್ಟಕ್ಕೆ ಆ ಪ್ರಶ್ನೆ ಎತ್ತುವುದಕ್ಕೆ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನಕ್ಕೆ ಅಧಿಕಾರ ಇಲ್ಲ. ನನ್ನ ಹಣೆ ಬರಹ ಸರಿ ಇಲ್ಲ ಹಾಗಾಗಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದಿದ್ದಾರೆ.

ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳೋದು ಬಿಡೋದು ಸಿಎಂ ಅವರಿಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನದ ಬಳಿಕ ನನ್ನ ಬೇಡಿಕೆ ಎತ್ತೋದು. ನಮ್ಮ ಪಕ್ಷದಲ್ಲಿ ರೀ ಶಫಲ್ ನಡೆದಾಗ ಈ ಚರ್ಚೆ ನಡೆಯುತ್ತದೆ. ಪದೇ ಪದೇ ನರೇಂದ್ರ ಸ್ವಾಮಿಗೆ ಅನ್ಯಾಯ ಆಗ್ತಿದೆ. ರಾಜಕಾರಣದಲ್ಲಿ ನನಗೆ ನತದೃಷ್ಟತನ ಅನ್ನೋದು ಜಾಸ್ತಿ ಕಾಡ್ತಿದೆ ಎಂದಿದ್ದಾರೆ.

1994, 1999, 2008ರ ಪ್ರಕರಣ ನೋಡಿ ರಾಜಕೀಯದ ಪ್ರಾರಂಭ ಒಂದು ಸಂಘರ್ಷ ಜೊತೆಯಲ್ಲೆ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದೆ. ಅದು ಯಾರ ಜೊತೆಗೆ..? ನಮ್ಮ ಪಕ್ಷದ ಜೊತೆಯಲ್ಲೆ. ಆದ್ರೆ ನಾನು ಪಕ್ಷದ ಸಿದ್ದಾಂತ, ಸಂಘಟನೆ ಬಿಡಲಿಲ್ಲ. ಪಕ್ಷೇತರನಾಗಿ ಇದ್ದಾಗಲು ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿದ್ದೆ. ಅವತ್ತು ಬಿಜೆಪಿ ಸರ್ಕಾರದ ಮಂತ್ರಿಯಾಗಿದ್ರು ಮಂಡ್ಯ ಡಿಸಿಸಿ ಸ್ಥಾನ ದಳದಿಂದ ಕಿತ್ತು ಕಾಂಗ್ರೆಸ್‌ಗೆ ಮಾಡಿದ್ದೆ. ಮನ್ಮುಲ್‌ ಅಧಿಕಾರವನ್ನು ಜನತಾ ದಳದಿಂದ ಕಿತ್ತು ಕಾಂಗ್ರೆಸ್‌ಗೆ ಮಾಡಿದ್ದು ನಾನೇ ಎಂದಿದ್ದಾರೆ.

Tags: BJPCMCongress GovernmentCongress PartyDCC Sthan DalMandyaMLA Narendra SwamyNagendra's inclusionshowed anger
Previous Post

ಸಿಎಂ ಸಿದ್ದರಾಮಯ್ಯಗೆ ಶುರುವಾಗಿದೆ ED ವಿಚಾರಣೆ ಟೆನ್ಷನ್‌

Next Post

ಮುಡಾ ಕೇಸ್‌; ಲೋಕಾಯುಕ್ತ ಪೊಲೀಸರಿಂದ ನೋಟಿಸ್‌ ಮರು ಜಾರಿ..

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ರಾಜಕೀಯ

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 26, 2026
0

ಬೆಂಗಳೂರು, ಏ.26: ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ....

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
Next Post

ಮುಡಾ ಕೇಸ್‌; ಲೋಕಾಯುಕ್ತ ಪೊಲೀಸರಿಂದ ನೋಟಿಸ್‌ ಮರು ಜಾರಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada