ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್ ಅಹ್ಮದ್ ಗೆ ಲೋಕಾಯುಕ್ತ ಬುಲಾವ್ ನೀಡಿದೆ.ಅಕ್ರಮ ಆಸ್ತಿ ಸಂಪಾದನೆ ಕೇಸ್ ನಲ್ಲಿ ಜಮೀರ್ ಅಹ್ಮದ್ ಗೆ ನೋಟೀಸ್ ನೀಡಲಾಗಿತ್ತು.
ಈ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಖುದ್ದು ಸಚಿವರ ನಿವಾಸಕ್ಕೆ ತೆರಳಿ, ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಟ್ಟಿದ್ದಾರೆ. ಡಿಸೆಂಬರ್ 3 ನೇ ತಾರೀಖಿಗೆ ಖುದ್ದು ವಿಚಾರಣೆಗೆ ಹಾಜರಾಗಲು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಸಚಿವ ಜಮೀರ್ ಖಾನ್ ರವರ ಬಂಬೂಬಜಾರ್ ನಲ್ಲಿರೋ ಮನೆ ಹಾಗೂ ಕಲಾಸಿಪಾಳ್ಯದ ಕಚೇರಿ ಮೇಲೆ ದಾಳಿ ನಡೆಸಿ ಈ ಹಿಂದೆ ಎಸಿಬಿ ಕೇಸ್ ದಾಖಲಿಸಿತ್ತು.ಆಗ ಪ್ರಾಥಮಿಕ ಹಂತದ ತನಿಖೆ ನಡೆಸಿ ಎಸಿಬಿ ಹೇಳಿಕೆ ದಾಖಲಿಸಿತ್ತು.ಆ ಬಳಿಕ ಎಸಿಬಿ ರದ್ದುಗೊಂಡ ಹಿನ್ನೆಲೆ ಲೋಕಾಯುಕ್ತಕ್ಕೆ ಈ ಕೇಸ್ ವರ್ಗಾವಣೆಯಾಗಿತ್ತು.