ಹಲಗೆವರೆಡಹಳ್ಳಿ ಡಿನೋಕಿಫಿಕೇಷನ್ ಆರೋಪ ಕೇಸ್ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆದಿದೆ.ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿ 19 ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು. ಸದ್ಯ ವಿಚಾರಣೆ ನ.23 ಕ್ಕೆ ಮುಂದೂಡಿ ಕೋರ್ಟ್ ಆದೇಶಿಸಿದೆ.
ಇಂದು ಹೆಚ್‌ಡಿ ಕುಮಾರಸ್ವಾಮಿ ಸ್ವಾಮಿ ಪರ ವಕೀಲ ಹಷ್ಮತ್ ಪಾಷ ವಾದ ಮಂಡನೆ ಮಾಡಿದ್ರು. ಇಲ್ಲಿ ದೂರುದಾರರು ನೀಡಿರುವ ದಾಖಲೆಗಳು ಆರ್.ಟಿ.ಐ ಪಡೆದ ದಾಖಲೆಗಳು. ಆದರೆ ಆರ್.ಟಿ.ಐ ಅಡಿ ಪಡೆದ ದಾಖಲೆಗಳು ಸರ್ಟಿಫೈ ಕಾಪಿಗಳು ಅಲ್ಲ. ಸರ್ಟಿಫೈ ಮಾಡದೇ ಇದ್ದಲ್ಲಿ ಆ ದಾಖಲೆಗಳು ಪರಿಗಣಿಸಲು ಸಾಧ್ಯವಿಲ್ಲ ಎಂದು ಈ ಸಂಬಂಧ ಹೈಕೋರ್ಟ್ ಆದೇಶ ಒಂದನ್ನ ಉಲ್ಲೇಖಿಸಿ ವಾದ ಮಾಡಿದ್ದಾರೆ.
ಕುಮಾರಸ್ವಾಮಿ ಪರ ವಕೀಲರ ವಾದಕ್ಕೆ ದೂರುದಾರರ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದ್ದು. ಆರ್.ಟಿ.ಐ ಪಡೆದಿರುವುದು ಪಬ್ಲಿಕ್ ಡಾಕ್ಯುಮೆಂಟ್ಸ್. ಗೆಜೆಟ್ ನೋಟಿಫಿಕೇಷನ್ ಸೇರಿ ಇತರೆ ದಾಖಲೆಗಳು ಪಬ್ಲಿಕ್ ಡಾಕ್ಯೂಮೆಂಟ್ಸ್. ಈ ದಾಖಲೆಗಳನ್ನ ಕೋರ್ಟ್ ಪರಿಗಣಿಸಬೇಕು ಎಂದು ದೂರುದಾರರ ವಕೀಲರ ವಾದ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ದಾಖಲೆಗಳ ಬಗ್ಗೆ ತಕರಾರು ಇಲ್ಲ.ಆದರೆ, ಸರ್ಟಿಫೈಡ್ ಅಲ್ಲದ ದಾಖಲೆಗಳನ್ನ ಕೇಸ್ ನಲ್ಲಿ ಮಾರ್ಕ್ಡ್ ಡಾಕ್ಯುಮೆಂಟ್ ಎಂದು ಪರುಗಣಿಸಲು ಸಾಧ್ಯವಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಪರ ಹಷ್ಮತ್ ಪಾಷ ವಾದ ಮಾಡಿದ್ದಾರೆ.
ಈ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಈ ಹಿಂದೆ ಹಲಗೆವಡೆರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಕೇಂದ್ರ ಸಚಿವ ಕುಮಾರ್ ಸ್ವಾಮಿ ಹಾಜರಾಗಿರಲಿಲ್ಲ.ಕಳೆದ ವಿಚಾರಣೆ ವೇಳೆ ಚುನಾವಣೆ ಕಾರಣ ನೀಡಿ ವಿನಾಯಿತಿ ಕೋರಿದ್ದರು. ಹೀಗಾಗಿ ವಿನಾಯಿತಿ ಕೋರಿದ್ದಕ್ಕೆ ಜನಪ್ರತಿನಿಧಿಗಳ ಕೋರ್ಟ್ ಗರಂ ಆಗಿತ್ತು.