ರಾಜ್ಯದಲ್ಲಿ ಪ್ರಿಪೇಯ್ಡ್ ವಿದ್ಯುತ್ ಮೀಟರ್ (Prepaid electric meter) ವ್ಯವಸ್ಥೆ ಜಾರಿಗೆ ತರಲು, ಹೊಸ ಕಟ್ಟಡಗಳಿಗೆ ವಿದ್ಯುತ್ ಕನೆಕ್ಷನ್ ಪಡೆಯೋರಿಗೆ ಪ್ರೀಪೇಯ್ಡ್ ಮೀಟರ್ ಕಡ್ಡಾಯ ಮಾಡಲು ಇಂಧನ ಇಲಾಖೆ ಮುಂದಾಗಿದೆ. ವಿದ್ಯುತ್ ಬಾಕಿ ಬಿಲ್ ಪಾವತಿ ಮಾಡದೆ ವಿದ್ಯುತ್ ಬಳಕೆ ಮಾಡ್ತಿರೋದ್ರಿಂದ ಇಂಧನ ಇಲಾಖೆಗೆ ಭಾರೀ ನಷ್ಟವಾಗ್ತಿದೆ.

ಹೀಗಾಗಿ ನಷ್ಟ ಭರಿಸಲು ಇಂಧನ ಇಲಾಖೆ ಹಲವು ರೀತಿ ಸರ್ಕಸ್ ಮಾಡ್ತಿವೆ.ಸದ್ಯ ಇದೀಗ ಮೊಬೈಲ್ ರೀಚಾರ್ಜ್ (Mobile recharge) ಮಾಡಿದಂತೆ ಹೊಸ ಕಟ್ಟಡಕ್ಕೆ ವಿದ್ಯುತ್ ಕನೆಕ್ಷನ್ ಪಡೆಯೋರಿಗೆ ಮಾತ್ರ ಪ್ರೀಪೆಯ್ ಮೀಟರ್ ಕಡ್ಡಾಯ ಮಾಡಲಾಗಿದೆ.
ಇದ್ರಿಂದ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದಂತೆ ದುಡ್ಡು ಕೂಡ ಕಟ್ ಆಗಲಿದೆ . ಆ ನಂತರ ಬ್ಯಾಲೆನ್ಸ್ ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ .ಹೀಗಾಗಿ ವಿದ್ಯುತ್ ಬಳಕೆಗೆ ಯುನಿಟ್ ಗೆ ತಕ್ಕಂತೆ ರೀಚಾರ್ಜ್ ಮಾಡಬೇಕಾಗುತ್ತೆ. ಇದಾದ ಬಳಿಕ ಹಂತ ಹಂತವಾಗಿ ಹಳೆ ಗ್ರಾಹಕರಿಗೂ ಪ್ರೀಪೇಯ್ಡ್ ಮೀಟರ್ ಅನ್ವಯಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.