ರಾಜ್ಯದಲ್ಲಿ ದಿನೇ ದಿನೇ ಉಪ ಚುನಾವಣೆ (Bi election) ಕಾವು ರಂಗೇರಿರುವ ಬೆನ್ನಲ್ಲೇ ವಕ್ಫ್ ಬೋರ್ಡ್ (Waqf board) ಆಸ್ತಿ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ (Congress & Bjp) ಎರಡೂ ಪಕ್ಷಗಳು ತಮ್ಮ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿವೆ.

ಈ ಬಗ್ಗೆ ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ (Cm siddaramaiah), ರೈತರಿಗೆ ನೀಡಿದ ನೋಟಿಸ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಬೀಸೋ ದೊಣ್ಣೆಯಿಂದ ಪಾರಾಗಲು ಮುಂದಾಗಿದ್ದಾರೆ. ಇದರ ನಡುವೆ ಬಿಜೆಪಿ ವಕ್ಫ್ ಬೋರ್ಡ್ ವಿರುದ್ಧ ಇವತ್ತು ರಾಜ್ಯಾಧ್ಯಂತ ಬೀದಿಗೆ ಇಳಿಯಲಿದೆ.
ರಾಜ್ಯದಲ್ಲಿ ರೈತರ ಜಮೀನು, ದೇಗುಲ, ಮಠ ಮಾನ್ಯಗಳ ಜಮೀನಿನ ಮೇಲೆ ವಕ್ಸ್ ಕಣ್ಣು ಬಿದ್ದಿದ್ದು, ನೋಟಿಸ್ ಹಿಂಪಡೆದ್ರೆ ಸಾಕಾಗಲ್ಲ. ಗೆಜೆಟ್ ನೋಟಿಫಿಕೇಷನ್ ಅನ್ನೇ ರದ್ದು ಮಾಡಿ ಎಂದು ಆಗ್ರಹಿಸಿ ಇಂದು ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿದೆ.