ದೇಶಾದ್ಯಂತ ದೀಪಾವಳಿಯ (Deepavali) ಸಂಭ್ರಮ ಮನೆ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಈ ಸಂಭ್ರಮ ಇನ್ನು ಕೊಂಚ ಹೆಚ್ಚಾಗಿದೆ. ಹೌದು, ರಾಮಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ರಾಮ ಮಂದಿರ ಉದ್ಘಾಟನೆ ಬಳಿಕ ನಡೆಯುತ್ತಿರುವ ಮೊದಲ ದೀಪಾವಳಿ ಇದಾಗಿದ್ದು, ಅಯೋಧ್ಯೆ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದೆ.

ಇಂದು ಸರಯೂ ನದಿ (Sarayu river) ತೀರದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸಲು ಭರ್ಜರಿ ತಯಾರಿ ನಡೆದಿದೆ. ಆಯೋಧ್ಯೆಯಲ್ಲಿ 8ನೇ ದೀಪೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ದೀಪಗಳನ್ನು ಇಡುವ ಕಾರ್ಯ, ಲೇಸರ್, ಧ್ವನಿ, ದ್ರೋಣ್‌ಗಳ ಪೂರ್ವಭಾವಿ ಪ್ರದರ್ಶನ ಪ್ರಗತಿಯಲ್ಲಿದೆ.
ಇನ್ನು ದೀಪೋತ್ಸವದಲ್ಲಿ ಪವಿತ್ರ ಅಯೋಧ್ಯೆಯ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಿನ್ನೆಲೆ ಪ್ರದರ್ಶಿಸುವ ಉದ್ದೇಶ ಇದ್ದು ನೇಪಾಳ, ಮಯನ್ಮಾರ್ ಸೇರಿ ವಿವಿಧ 6 ದೇಶಗಳ ಕಲಾವಿದರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಣ್ಣಬಣ್ಣದ ವಿದ್ಯುದಲಂಕಾರಗಳಿಂದ ಅಯೋಧ್ಯೆ ನಗರ ಝಗಮಗಿಸುತ್ತಿದ್ದು ಕಣ್ಮನ ಸೂರೆಗೊಂಡಿದೆ.