ಆರೋಪಿ ದರ್ಶನ್ಗೆ (Actor darshan) ಕೊಲೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದರ್ಶನ್ ಆಯ್ಕೆಯ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು. ಅಡ್ಡಿಟ್ ಆಗಿ ಒಂದು ವಾರದಲ್ಲಿ ದರ್ಶನ್ ಆರೋಗ್ಯ ವರದಿ ನೀಡಬೇಕು. ಯಾವ ಚಿಕಿತ್ಸೆ ಆಗಿದೆ ಅಂತಾ ರಿಪೋರ್ಟ್ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಇನ್ನು ದರ್ಶನ್ ಪಾಸ್ಪೋರ್ಟ್ (Passport) ಕೋರ್ಟ್ಗೆ ಸರಂಡರ್ ಮಾಡೇಕು. ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು ಅಂತ ಕೋರ್ಟ್ ಷರತ್ತು ವಿಧಿಸಿದೆ. ಅಲ್ಲದೆ, ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡೋದಾಗಲಿ, ಸಾಕ್ಷಿಗಳನ್ನು ಸಂಪರ್ಕ ಮಾಡೋದಾಗಲಿ ಅಥವಾ ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು ಅಂತ ದರ್ಶನ್ಗೆ ಹೈಕೋರ್ಟ್ (Highcourt) ಸೂಚಿಸಿದೆ.
ಆದ್ರೆ, ಇದು ದರ್ಶನ್ ಪಾಲಿಗೆ ತಾತ್ಕಾಲಿಕ ರಿಲೀಫ್ ಆಗಿದ್ದು, ಆರೋಗ್ಯ ಕಾರಣಕ್ಕಾಗಿ ದರ್ಶನ್ಗೆ ಜಾಮೀನು ಮಂಜೂರು ಮಾಡಲಾಗಿದೆ. ಆದ್ರೆ, 6 ವಾರಗಳ ಚಿಕಿತ್ಸೆಯ ಬಳಿಕ ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿಯಿದೆ.