ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಓಲೈಕೆ ಮಾಡಲಾಗ್ತಿದೆ ಎನ್ನುವ ಆರೋಪ ಗಟ್ಟಿಯಾಗಿ ಕೇಳಿ ಬರ್ತಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಿಧಾನಸೌಧದಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರ ಓಲೈಕೆ ಮಾಡೋದು. ವಿಶೇಷವಾಗಿ ಮುಸ್ಲಿಮರ ಓಲೈಕೆ ಮಾಡ್ತಾರೆ ಎಂದು ಟೀಕಿಸಿದ್ದಾರೆ.
ಟಿಪ್ಪು ಜಯಂತಿ ಮಾಡೋಕೆ ಆದೇಶ ಹೊರಡಿಸಿದ್ರು. ಮುಸ್ಲಿಮರು ಏನಾದರೂ ಕೇಳಿದ್ರಾ..? ಕಾಂಗ್ರೆಸ್ ಬಂದ್ರೆ ಇರೋ ಬರೋ ಆಸ್ತಿ ಎಲ್ಲಾ ವಕ್ಫ್ ಬೋರ್ಡಿಗೆ ಬರೆದಿದ್ದಾರೆ. ಅವನ್ಯಾರೋ ಪಾರ್ಲಿಮೆಂಟ್ ನಮ್ಮದೆ ಅಂತ ಹೇಳಿದ್ದ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ವಿಧಾನಸೌಧ ಕೂಡ ಅವರದ್ದೇ, ಲೋಕಸಭೆ ಕೂಡ ಅವರದ್ದೇ. ಎಲ್ಲಾ ಆಸ್ತಿ ಮುಸ್ಲೀಮರದ್ದು ಅಂತೆ. ಏನು ಅರಬ್‌ನವರು ಕೊಟ್ರಾ..? ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಎಂತ ಹೀನಾಯ ಪರಿಸ್ಥಿತಿಗೆ ಬಂದಿದೆ ಅಂದ್ರೆ. ವಿಜಯಪುರದಲ್ಲಿ ಆಗಿರುವ ಸಮಸ್ಯೆ ಬಗೆಹರಿಸೋ ಪ್ರಯತ್ನ ಮಾಡ್ತಿಲ್ಲ. ಮಾತೆತ್ತಿದ್ರೆ ಎಲ್ಲವನ್ನೂ SIT, SIT ಅಂತಾರೆ. ಈಗ ತಹಶೀಲ್ದಾರರು ಮಾಡಿರುವ ತಪ್ಪು ಅಂತ ಹೇಳ್ತಿದ್ದಾರೆ. ಈಗ ಬಿಜೆಪಿ ಕಾಲದಲ್ಲಿ ಅಂತ ಹೇಳ್ತಿದ್ದಾರೆ. ಕಾಲ ಯಾವುದು ಅಂತಲ್ಲ, ತಪ್ಪು ಏನಾಗಿದೆ ಅನ್ನೋದು ಮುಖ್ಯ. ಯಾರ ಕಾಲದಲ್ಲೇ ಆಗಲಿ ತಪ್ಪು ಸರಿಪಡಿಸಬೇಕು. ಕೆಲವರು ದಂದೆಕೋರರಿದ್ದಾರೆ. ಕಾಂಗ್ರೆಸ್ ಬಂದ್ರೆ ಎಲ್ಲಾ ಅಲ್ಪ ಸಂಖ್ಯಾತರಿಗೆ ಬರೆದುಕೊಡ್ತಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಪ್ರವೃತ್ತಿ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ದಂಗೆ ಎದ್ರೆ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದು ಎಚ್ಚರಿಕೆ ಕೊಟ್ಟಿರುವ ಆರ್ ಅಶೋಕ್, ರೈತರೇ ಇವರಿಗೆ ಪಾಠ ಕಲಿಸಲಿದ್ದಾರೆ. ರಾಜ್ಯ ಸರ್ಕಾರವೇ ಈ ತಪ್ಪನ್ನ ಸರಿಪಡಿಸಬೇಕು. ತಹಶಿಲ್ದಾರ್ ತಪ್ಪು ಮಾಡಿದ್ರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನೋಂದಣಿ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್ ಬಂದರೆ ಮಾತ್ರ ಇವೆಲ್ಲ ಆಗುತ್ತೆ, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಇವರೆಲ್ಲರೂ ಬಾಲ ಬಿಚ್ಚಲ್ಲ. ರೈತರಿಗೆ ದಾನ ಕೊಟ್ಟಿರುವ ಭೂಮಿ ಅದು ಅಂತಾರಲ್ಲ, ಏನು ಅರಬ್ ದೇಶದಿಂದ ಬಂದು ದಾನ ಕೊಟ್ಟಿದ್ರಾ..? ಎಂದು ಪ್ರಶ್ನಿಸಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ರೈತರ ಮರಣ ಶಾಸನ ಬರೆಯಲು ಹೊರಟಿದೆ, ಇದು ನಿಲ್ಲಬೇಕು. ಸಾವಿರಾರು ಎಕರೆ ರೈತರು ಉಳುಮೆ ಮಾಡ್ತಿರುವ ಭೂಮಿ, ವಕ್ಫ್ ಬೋರ್ಡ್ಗೆ ಸೇರಿದ್ದು ಅಂತ ಮಂತ್ರಿಯೇ ಹೇಳಿ ಬಂದಿದ್ದಾರೆ. ಆದರೆ ಈಗ ತಹಶೀಲ್ದಾರ್ ತಪ್ಪಿನಿಂದ ಆಗಿದ್ದು ಅಂತಿದ್ದಾರೆ ಯಾಕೆ..? ರೈತರನ್ನು ಒಕ್ಕಲೆಬ್ಬಿಸುವ ಪ್ರವೃತ್ತಿ ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ನಿಜವಾಗಲೂ ಮುಸ್ಲಿಮರನ್ನು ಓಲೈಕೆ ಮಾಡುತಿದ್ಯಾ ಅನ್ನೋ ಅನುಮಾನ ದಟ್ಟವಾಗಿದೆ.