ಹೊಟ್ಟೆ ಸೇರಿದ್ದು ಒಂದು ಗ್ಲಾಸ್ ಜ್ಯೂಸ್- ಕಟ್ಟಿದ್ದು 16,400/- ಬಿಲ್
- ಕೆಫೆ ಹೆಸರಲ್ಲಿ ಹೈ ಟೆಕ್ ವಸೂಲಿ-ಮೀಟ್ ಮಾಡಲು ಬಂದವರ ಜೇಬಿಗೆ ಕತ್ತರಿ
- ಡೇಟಿಂಗ್ ಹೆಸರಲ್ಲಿ ಹುಡುಗರಿಗೆ ಗಾಳ-ಮಾಡ್ತಿದ್ರು ಸಾವಿರಾರು ರೂಪಾಯಿ ವಸೂಲಿ
- ಕುಡಿದಿದ್ದು ಒಂದೇ ಒಂದು ಜ್ಯೂಸ್ ಬಿಲ್ ನೋಡಿ ಯುವಕ ಶಾಕ್….!
ಘಾಜಿಯಾಬಾದ್: ಹುಡಗಿಯರ ಆಸೆ ತೋರಿಸಿ ಬಂದವರ ಜೇಬಿಗೆ ಕತ್ತರಿ ಹಾಕ್ತಾ ಇದ್ದ ಕಿಲಾಡಿ ಗ್ಯಾಂಗ್ ಪೊಲೀಸರ ಅತಿಥಿಯಾಗಿದ್ದಾರೆ.. ಅಂದಹಾಗೆ ಘಾಜಿಯಾಬಾದ್ ನಲ್ಲಿ ಕಿಲಾಡಿ ಗ್ಯಾಂಗ್ ಒಂದು ವಿಭಿನ್ನ ರೀತಿ ಐಡಿಯಾ ಹಾಕೊಂಡು ಹಣ ಮಾಡಲು ನಿಂತಿತ್ತು. ಈ ಚಾಲಕಿ ಗ್ಯಾಂಗ್ ಅಂದುಕೊಂಡ ಫ್ಲಾನ್‌ನಂತೆ ಒಂದು ಕೆಫೆ ಕೂಡ ನಡೆಸ್ತಾ ಇತ್ತು. ಇಲ್ಲಿಯ ವಸ್ತುಗಳಿಗೆ ಯಾವ ಮಟ್ಟಿಗೆ ಬೆಲೆ ಅಂದ್ರೆ 1 ಗ್ರಾಂ ಚಿನ್ನ ಬೇಕಾದ್ರೂ ಕೊಂಡುಕೊಳ್ಳಬಹುದು ಆದ್ರೆ ಇಲ್ಲಿಯ ತಿಂಡಿ ಜ್ಯೂಸ್ ಸೇವಿಸಿದವನ ಜೇಬು ಖಾಲಿಯಾಗ್ತಾ ಇತ್ತು…
ಹೀಗೆ ಈ ಕೆಫೆ ಗ್ರಾಹಕರನ್ನ ಕರೆಸಿಕೊಳ್ಳೊದಕ್ಕೆ ಅಂತ ಫ್ಲಾನ್ ಮಾಡಿದ್ದ ಗ್ಯಾಂಗ್ ಡೇಟಿಂಗ್ ನೆಪದಲ್ಲಿ ಹುಡುಗರನ್ನ ಗಾಳಕ್ಕೆ ಹಾಖ್ತಿದ್ರು ನಂತರ ಡೇಟಿಂಗ್ ನೆಪದಲ್ಲಿ ಬಂದವರಿಗೆ ತಿಂಡಿ ಜ್ಯೂಸ್ ಆರ್ಡರ್ ಮಾಡುವಂತೆ ಮಾಡಿಸ್ತಾ ಇದ್ರು ನಂತರ ನೋಡಿ ಆರ್ಡರ್ ಮಾಡಿದ ತಿಂಡಿಗಳಿಗೆ ಸಾವಿರಾರು ರೂಪಾಯಿ ಬಿಲ್ ಕಟ್ಟಿ ಬಂದ ದಾರಿ ಸುಂಕವಿಲ್ಲದಂತೆ ತೆರಳಬೇಕಾಗಿತ್ತು, ತಿಂದಿದ್ದ ತಿಂಡಿಯ ದುಡ್ಡನ್ನು ಕಟ್ಟದೇ ಹೋದಲ್ಲಿ ಅವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬೆದರಿಸಿ ಹಣವನ್ನು ವಸೂಲಿ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಅಕ್ಟೋಬರ್ 21ರಂದು ಒಬ್ಬ ವ್ಯಕ್ತಿಗೆ ವಾಟ್ಸಾಪ್ ಮೂಲಕ ಒಂದು ಡೇಟಿಂಗ್ ಆಫರ್ ಇರುವ ಸಂದೇಶ ಬರುತ್ತದೆ. ಅದರ ಹಿಂದಿರುವ ಜಾಲವನ್ನು ಅರಿಯದ ವ್ಯಕ್ತಿ ಹುಡುಗಿಯನ್ನು ಮೀಟ್ ಮಾಡಲು ಕೌಶಾಂಬಿ ಮೆಟ್ರೋ ನಿಲ್ದಾಣಕ್ಕೆ ಹೊರಡುತ್ತಾರೆ. ಅಲ್ಲಿ ಭೇಟಿಯಾದ ಹುಡುಗಿ ಆ ವ್ಯಕ್ತಿಯನ್ನು ಟೈಗರ್ ಕೆಫೆಗೆ ಕರೆದುಕೊಂಡು ಹೋಗುತ್ತಾಳೆ. ಆ ಕೆಫೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಗೆ ಅನೇಕ ಸಂಶಯಗಳು ಹೆಡೆಯೆತ್ತಲು ಶುರುವಾಗುತ್ತವೆ. ಆನ್ಲೈನ್ನಲ್ಲಿ ತೋರಿಸಿದ ಯಾವುದೇ ಬೋರ್ಡ್ಗಳು ಅಲ್ಲಿ ಅವನಿಗೆ ಕಾಣಿಸುವುದಿಲ್ಲ. ಇಲ್ಲಿ ಏನೋ ಸರಿಯಿಲ್ಲ ಎಂದು ಗಮನಿಸಿದ ವ್ಯಕ್ತಿ ಕೂಡಲೇ ತನ್ನ ಗೆಳೆಯನಿಗೆ ಲೈವ್ ಲೋಕೇಷನ್ ಶೇರ್ ಮಾಡುತ್ತಾನೆ. ಅದರ ಜೊತೆಗೆ ತನ್ನ ಪರಿಸ್ಥಿತಿಯನ್ನು ಮೆಸೇಜ್ನಲ್ಲಿ ವಿವರಿಸುತ್ತಾನೆ.
ಇನ್ನೇನು ಎದ್ದು ಹೊರಡಬೇಕು ಅನ್ನುವಷ್ಟರಲ್ಲಿ ಆ ವ್ಯಕ್ತಿಯ ಮನಸಲ್ಲಿ ಹುಟ್ಟಿದ್ದ ಸಂಶಯ ನಿಜವಾಗಿ ಬೆಳಕಿಗೆ ಬರುತ್ತದೆ. ಆ ಹುಡುಗಿ ಕುಡಿದಿದ್ದ ಒಂದೇ ಒಂದು ಕೋಲ್ಡ್ ಡ್ರಿಂಕ್ಸ್ಗೆ ಅಲ್ಲಿ 16,400 ರೂಪಾಯಿ ಬಿಲ್ ನೀಡಲಾಗಿರುತ್ತೆ. ಇದನ್ನು ವಿರೋಧಿಸಿದ ವ್ಯಕ್ತಿಗೆ 50 ಸಾವಿರ ರೂಪಾಯಿ ಕೊಟ್ಟರೆ ಮಾತ್ರ ನಾನು ನಿನ್ನನ್ನು ಇಲ್ಲಿಂದ ಹೋಗಲು ಬಿಡುತ್ತೇವೆ ಎಂಬ ಧಮ್ಕಿ ಕೂಡ ಬರುತ್ತೆ.
ಇನ್ನು ವಸೂಲಿ ಗ್ಯಾಂಗ್ ನ ಕೈ ಯಲ್ಲಿ ತಗ್ಲಾಕಿಕೊಂಡಿದ್ದ ವಿಚಾರ ತಿಳಿದಿದ್ದ ಸ್ನೇಹಿತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡ್ತಾನೆ… ಮಾಹಿತಿ ತಿಳಿದ ಪೊಲೀಸರು ಸ್ಪಾಟ್‌ಗೆ ಬಂದು ಹೈ ಟೆಕ್ ವಸೂಲಿ ಗ್ಯಾಂಗ್ ಅನ್ನು ಲಾಕ್ ಮಾಡ್ಕೊಂಡು ವಿಚಾರಿಸಿದಾಗ ಹಲವರಿಂದ ಇದೇ ರೀತಿ ವಸೂಲಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಇನ್ನು ಈ ವಸೂಲಿ ಗ್ಯಾಂಗ್ ಟೀಂ ಲೀಡರ್ ಸೇರಿದಂತೆ ಒಟ್ಟು ಏಳು ಜನರನ್ನ ಬಂದಿಸಿದ್ದಾರೆ.. ಇವರಲ್ಲಿ ಮೂವರು ಯುವಕರು ಆದ್ರೆ ನಾಲ್ವರು ಯುವತಿಯರು ಈ ಗ್ಯಾಂಗ್ ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ…..