ಕಿಚ್ಚ ಸುದೀಪ್ (Kichha Sudeep) ಅವರ ತಾಯಿ ಸರೋಜಾ (Saroja) ನಿಧನದ ಹಿನ್ನಲೆ ನಟ ಕಿಚ್ಚ ಸುದೀಪ್ ಈ ವಾರ ಬಿಗ್‌ಬಾಸ್ (Bigboss) ವೀಕೆಂಡ್ ಶೋ ನಲ್ಲಿ ಗೈರಾಗಲಿದ್ದಾರೆ. ಹೀಗಾಗಿ ವೀಕೆಂಡ್ ಪಂಚಾಯಿತಿ ನಡೆಸೋರು ಯಾರು ಎಂಬ ಚರ್ಚೆ ಜೋರಾಗಿದೆ.

ಇಡೀ ವಾರ ನಡೆಯುವ ಬಿಗ್ ಬಾಸ್ ಮನೆಯ ಬೆಳವಣಿಗೆಗಳ ಬಗ್ಗೆ, ಸರಿ ತಪ್ಪುಗಳ ಬಗ್ಗೆ ವಾರದ ಕೊನೆಯಲ್ಲಿ ಕಿಚ್ಚ ಸರಿ ತಪ್ಪುಗಳನ್ನು ತೂಗಿ ಕಂಟೆಸ್ಟೆಂಟ್ ಗಳಿಗೆ ಕ್ಲಾಸ್ ತಗೊಳ್ತಿದ್ರು. ಅದಕ್ಕೆ ಕಿಚ್ಚ ಬಿಟ್ರೆ ಮತ್ಯಾರು ಸೂಟ್ ಆಗಲ್ಲ ಅನ್ನೋದು ಕೂಡ ಪ್ರೇಕ್ಷರರ ಅಭಿಪ್ರಾಯವಾಗಿದೆ.
ಆದ್ರೆ ಈ ವಾರ ಮಾತೃವಿಯೋಗದ ನೋವಿನಲ್ಲಿರುವ ಕಾರಣ ಸುದೀಪ್ ಶೋ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುದೀಪ್ ಅವರ ಬದಲಿಗೆ ಇಂದು ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಹಾಗೂ ನಾಳೆ ಸೃಜನ್ ಲೋಕೇಶ್ (Saruhan Lokesh) ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಅಂತ ಮೂಲಗಳಿಂದ ತಿಳಿದು ಬಂದಿದೆ.