
ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನ ಮಾಲ್ ವೊಂದರಲ್ಲಿ ಕನ್ನಡದ ನಟನ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ತೆಲುಗಿನ ಲವ್ ರೆಡ್ಡಿ ಸಿನಿಮಾದಲ್ಲಿ ಅಭಿನಯ ಮಾಡಿದ್ದ ನಟರೊಬ್ಬರ ಮೇಲೆ ಮಹಿಳಾ ಪ್ರೇಕ್ಷಕಿರೊಬ್ಬರು ಹಲ್ಲೆ ನಡೆಸಿದ ಘಟನೆ ಹೈದಾರಾಬಾದ್ ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ನಡೆದಿದೆ.
ಮಾಲ್‌ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್ ನೋಡಿದ ನಂತರ ಕೆಲ ವೀಕ್ಷಕರು ಭಾವುಕರಾಗಿದ್ದು, ಇದೇ ವೇಳೆ ಸಿನಿಮಾ ತಂಡ ವೇದಿಕೆ ಮೇಲೆ ಹತ್ತಿದೆ.ಈ ವೇಳೆ ಚಿತ್ರದಲ್ಲಿ ಅಭಿನಯಿಸಿದ್ದ ಕನ್ನಡದ ನಟ ಎನ್‌ಟಿ ರಾಮಸ್ವಾಮಿ ಅವರ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.
ಇದೇ ಸಿನಿಮಾದಲ್ಲಿ ನಟ ಎನ್‌ಟಿ ರಾಮಸ್ವಾಮಿ ಅವರು ತಂದೆ ಪಾತ್ರದಲ್ಲಿ ಅಭಿನಯ ಮಾಡಿದ್ದು, ಸಿನಿಮಾದಲ್ಲಿ ಪ್ರೇಮಿಗಳನ್ನು ದೂರ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಕೋಪಗೊಂಡು ಎನ್‌ಟಿ ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#LoveReddy చిత్ర నటుడిపై ప్రేక్షకురాలి దాడి..
— Ramesh Pammy (@rameshpammy) October 24, 2024
హైదరాబాద్ నిజాంపేట జీపీఆర్ మాల్ లో ఘటన
సినిమా క్లైమాక్స్ చూసి ఎమోషనల్ అయిన ఒక ప్రేక్షకురాలు థియేటర్స్ విజిట్ కు వెళ్లిన చిత్రబృందంలోని తండ్రి పాత్రను పోషించిన ఎన్ టీ రామస్వామి అనే నటుడు నిజంగానే ఆ ప్రేమజంటను విడిదీశాడని కోపంతో తిడుతూ… pic.twitter.com/FY9uuXTUlC
ಬಳಿಕ ಆಕೆಯನ್ನ ಸಮಾಧಾನ ಪಡಿಸಿ ಅದು ಸಿನಿಮಾದಲ್ಲಿ ನಟಿಸಿದ್ದು, ನಿಜ ಜೀವನದಲ್ಲಿ ಅವರು ಕೆಟ್ಟವರಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಅಂದಹಾಗೆ ಇದೇ ತಿಂಗಳ 18ರಂದು ಬಿಡುಗಡೆಯಾದ ಲವ್ ರೆಡ್ಡಿ ಮೂವಿಯಲ್ಲಿ ನಟ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ಜೋಡಿಯಾಗಿ ನಟಿಸಿದ್ದರು.