ರೇಜೂಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy murder case) ಬಳ್ಳಾರಿ ಜೈಲಿನಲ್ಲಿರುವ (bellary Jail) ಆರೋಪಿ ದರ್ಶನ್ ಗೆ (actor darshan) ಸಂಕಷ್ಟಗಳ ಸರಮಾಲೆ ಎದುರಾಗಿದೆ. ಆರೋಗ್ಯ ಸಮಸ್ಯೆ. ಬೆನ್ನು ನೋವು, ಬೇಲ್ ಅರ್ಜಿ ಟೆನ್ಸನ್ ಜೊತೆಗೆ ನಟ ದರ್ಶನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಈ ಹಿಂದೆ ಕೋವಿಡ್ 3ನೇ ಅಲೆ ಮುಗಿದ ಸಂದರ್ಭದಲ್ಲಿ ನಿರ್ಮಾಪಕ ಭರತ್‌ಗೆ (Producer bharath) ಪೋನ್‌ನಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ವಿರುದ್ಧ ಮತ್ತೆ ಈಗ ಎನ್‌ಸಿಆರ್ ದಾಖಲಾಗಿದೆ. 2020 ರಲ್ಲಿ ನಿರ್ಮಾಪಕ ಭರತ್ ರವರು ಭಗವಾನ್ ಶ್ರೀ ಕೃಷ್ಣಾ ಎಂಬ ಸಿನಿಮಾ ನಿರ್ಮಾಣ ಮಾಡ್ತಿದ್ರು. ಇದರಲ್ಲಿ ದೃವನ್ ನಾಯಕನಾಗಿ ಅಭನಯಿಸ್ತಿದ್ರು.
ಆದ್ರೆ, ಕೋವಿಡ್ (covid 19) ಹಿನ್ನೆಲೆ ಸಿನಿಮಾ ಅರ್ಧಕ್ಕೆ ನಿಂತುಹೋಗಿತ್ತು. ಇದ್ರಿಂದ ದೃವನ್, ದರ್ಶನ್ ಮನೆಗೆ ಹೋಗಿ ನಿರ್ಮಾಪಕ ಭರತ್‌ಗೆ ಕರೆ ಮಾಡಿಸಿದ್ದು, ಈ ವೇಳೆ ದರ್ಶನ್ ಭರತ್‌ಗೆ ಸಿನಿಮಾ ಯಾಕೆ ನಿಲ್ಲಿಸಿದ್ದೀಯಾ, ಸಿನಿಮಾ ಚಿತ್ರಿಕರಣ ಮುಗಿಸದಿದ್ರೆ, ನೀನೆ ಇರೋದಿಲ್ಲ ಅಂತ ಬೆದರಿಕೆ ಹಾಕಿದ್ದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇದೀಗ ಬೆದರಿಕೆ ಕೇಸ್ ಅಡಿಯಲ್ಲಿ ದೃವನ್, ದರ್ಶನ್, ಮ್ಯಾನೇಜರ್ ನಾಗರಾಜ್ ವಿರುದ್ಧ ಎನ್‌ಸಿಆರ್ (NCR)ದಾಖಲಾಗಿದೆ.



