ಪ್ರತಿದಿನ 3 ಲೀಟರ್ ಅಷ್ಟು ನೀರು ಕುಡಿಬೇಕು..ನೀರು ಕುಡಿಯುವುದರಿಂದ ಒಂದಿಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ..ಇನ್ನು ನೀರನ್ನು ಕುಡಿಯಲು ಹೆಚ್ಚಾಗಿ ಸ್ಟೀಲ್ ಬಾಟಲ್ಸ್ ,ಪ್ಲಾಸ್ಟಿಕ್ ಬಾಟಲ್ ಗಳು ,ಸ್ಟೀಲ್ ಲೋಟ ಅಥವಾ ಪ್ಲಾಸ್ಟಿಕ್ ಲೋಟವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಹಿರಿಯರು ಅಥವಾ ಪೂರ್ವಜರು ಹಿಂದಿನಿಂದಲೂ ತಾಮ್ರದ ಪಾತ್ರೆಯಲ್ಲಿ ಅಥವಾ ಲೋಟವನ್ನು ನೀರು ಕುಡಿಯಲು ಬಳಸುತ್ತಿದ್ದರು..
ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ.ಸ್ಕೂಲ್ ಗೆ ಹೋಗುವ ಮಕ್ಕಳಿಗೆ ಪ್ಲಾಸಿಕ್ ಬಾಟಲ್ ಅಲ್ಲಿ ನೀರು ಕೊಟ್ಟು ಕಳಿಸ್ತಾರೆ.ಆಫೀಸ್ ಗಳಲ್ಲ ಪ್ಲಾಸಿಕ್ ಬಾಟಲ್ ಹೆಚ್ಚು ಯೂಸ್ ಮಾಡ್ತಾರೆ..ಕೆಲವರಿಗೆ ಆ ಬಾಟಲ್ ವಾಶ್ ಮಾಡುವುದು ಕೂಡ ಕಷ್ಟ..ಅತಿಯಾಗಿ ಪ್ಲಾಸ್ಟಿಕ್ ಬಾಟಲ್ ಅಥವಾ ಲೋಟ ಬಳಸಿ ನೀರು ಕುಡಿಯುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ..ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ
ಅತಿಯಾಗಿ ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಕ್ಯಾನ್ಸರ್ ಅಪಾಯ ಜಾಸ್ತಿ ಆಗುತ್ತದೆ. ಕಾರಣ ಪ್ಲಾಸ್ಟಿಕ್ ನಲ್ಲಿ ಅತಿಯಾಗಿ ಕೆಮಿಕಲ್ಸ್ ಅನ್ನು ಬಳಸಲಾಗುತ್ತದೆ.
ಸಂತಾನೋತ್ಪತ್ತಿ ಸಮಸ್ಯೆಗಳು
ಕೆಲವರು ಪ್ಲಾಸ್ಟಿಕ್ ಬಾಟಲಿಗೂ ಕೂಡ ಬಿಸಿ ನೀರನ್ನ ಹಾಕಿ ಸ್ಟೋರ್ ಮಾಡಿ ಇಟ್ಟು ಕುಡಿಯುತ್ತಾರೆ. ಇದರಿಂದ ಕೆಮಿಕಲ್ ನೀರಿನಲ್ಲಿ ಮಿಶ್ರಣವಾಗಿ, ದೇಹಕ್ಕೆ ಸೇರಿದಾಗ ಹಾರ್ಮೋನ್ಸ್ ಅಲ್ಲಿ ಬದಲಾವಣೆಗಳು ಆಗುತ್ತದೆ ಮುಖ್ಯವಾಗಿ ಸಂತಾನೋತ್ಪತ್ತಿ ಸಮಸ್ಯೆಗಳು ಎದುರಾಗುತ್ತದೆ.
ನರವೈಜ್ಞಾನಿಕ ತೊಂದರೆಗಳು
BPA ಮತ್ತು ಇತರ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ, ನರವೈಜ್ಞಾನಿಕ ಸಮಸ್ಯೆ ಎದುರಾಗುತ್ತದೆ..ಮುಖ್ಯವಾಗಿ ಅರಿವಿನ ದುರ್ಬಲತೆ ಉಂಟಾಗುತ್ತದೆ..ಅದರಿಂದ ದೊಡ್ಡವರಾಗಲಿ ಮಕ್ಕಳಾಗಲಿ ಪ್ಲಾಸ್ಟಿಕ್ ಬಾಟೆಲ್ ಬಳಕೆ ಕಡಿಮೆ ಮಾಡುವುದು ಉತ್ತಮ.