
ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Actor Darshan) ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಸೋಮವಾರ(ಅ.14ರಂದು) 57ನೇ ಸಿಸಿಎಚ್ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ. ಎ2 ಆರೋಪಿ ದರ್ಶನ್, ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಮಾಡಲಾಗಿದ್ದು ಜೈಲೇ ಗತಿ ಎನ್ನುವಂತಾಗಿದೆ.

ಎ 11 ನಾಗರಾಜು, ಎ 12 ಲಕ್ಷ್ಮಣ್ ಅವರ ಜಾಮೀನು ಅರ್ಜಿಯನ್ನೂ ವಜಾ ಮಾಡಿದೆ. ಇದೆ ವೇಳೆ ಎ 8 ರವಿಶಂಕರ್, ಎ 13 ದೀಪಕ್ ಗೆ ಜಾಮೀನು ಮಂಜೂರು ಮಾಡಿದೆ.
ದರ್ಶನ್ ಪರ ವಕೀಲ ನಾಗೇಶ್ , ಪೊಲೀಸರ ಪರ ಎಸ್‌ಪಿಸಿ ಪ್ರಸನ್ನ ಕುಮಾರ್ ಅವರ ವಾದ – ಪ್ರತಿವಾದವನ್ನು ಆಲಿಸಿರುವ ನ್ಯಾಯಧೀಶ ಜೈಶಂಕರ್ ಅವರು ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದ್ದಾರೆ.
ಎ2 ದರ್ಶನ್ , ಎ1 ಪವಿತ್ರಾ ಗೌಡ (Pavithra Gowda) , ರವಿಶಂಕರ್, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಅವರು ಪ್ರಕಟಿಸಿದ್ದಾರೆ.ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.




