ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ (Bigboss Kannada season 11) ಟ್ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು ಮೂಡಿ ಬರುತ್ತಿವೆ. ಅಕ್ಟೋಬರ್ 11 ರ ಶುಕ್ರವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಅಭ್ಯರ್ಥಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್ ಮನೆಯಲ್ಲಿ ನಡೆದ ಬೆಳವಣಿಗೆ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ರಾತ್ರೋರಾತ್ರಿ ಶಾಕ್ ನೀಡಿದೆ.

ಶುಕ್ರವಾರ ರಾತ್ರಿ ಧಿಡೀರನೆ ದೊಡ್ಡಮನೆಯೊಳಗೆ ಕ್ರೇನ್ (Crane) ಸದ್ದು ಮಾಡಿದೆ. ನಂತರ ಕಪ್ಪು ಬಟ್ಟೆ ಧರಿಸಿ, ಮುಖ ಮುಚ್ಚಿಕೊಂಡು ಕೈಯಲ್ಲಿ ಆಯುಧಗಳನ್ನು ಹಿಡಿದ ಸಾಕಷ್ಟು ಜನ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಹೀಗೆ ಮಾಸ್ಕ್ ಧರಿಸಿ ಎಂಟ್ರಿ ಕೊಟ್ಟಾಕ್ ವ್ಯಕ್ತಿಗಳು ಮನೆಯೊಳಗಿನ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಇದನ್ನು ಕಂಡ ಸ್ಪರ್ಧಿಗಳು ಏನು ನಡೆಯುತ್ತಿದೆ ಎಂದು ಗಾಬರಿಯಾದ್ರು. ಮನೆಯ ನರಕದ ಗೋಡೆ, ಹಾಸಿಗೆ ದಿಂಬು ಎಲ್ಲವನ್ನೂ ಈ ವ್ಯಕ್ತಿಗಳು ನಾಶಪಡಿಸಿದ್ರು.
ಅಷ್ಟರಲ್ಲಿ ಸದ್ದು ಮಾಡಿದ ಬಿಗ್ ಬಾಸ್ ಧ್ವನಿ ಸ್ವರ್ಗ ಮತ್ತು ನರಕದ ನಡುವೆ ಇದ್ದ ಗೋಡೆಯನ್ನು ಒಡೆದು ಹಾಕಿದ ಬಗ್ಗೆ ಸ್ಪಷ್ಟನೆ ನೀಡಿದರು. ಇಷ್ಟು ದಿನ ಸ್ಪರ್ಧಿಗಳ ನಡುವೆ ಜಗಳಕ್ಕೆ ಕಾರಣವಾಗಿದ್ದ ಸ್ವರ್ಗ- ನರಕದ ಕಾನ್ಸೆಪ್ಟ್ಗಳು ಇನ್ನು ಮುಂದೆ ಇರುವುದಿಲ್ಲ. ಎಲ್ಲರೂ ಬಿಗ್ ಮನೆಯಲ್ಲಿ ಸಮಾನ ಸ್ಪರ್ಧಿಗಳಂತೆ ಮುಂದುವರಿಯಲಿದ್ದೀರಿ ಎಂದು ತಿಳಿಸಿದ್ದಾರೆ.