ಮುಂಬಯಿ: ಅಗಲಿದ ಉದ್ಯಮಿ ರತನ್ ಟಾಟಾ (Ratan Tata Death, Ratan Tata passed Away) ಅವರಿಗೆ ಅವರ ಮಾಜಿ ಪ್ರೇಯಸಿ ಸಿಮಿ ಗರೆವಾಲ್ (Simi Garewal) ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಭಾವುಕ ಶ್ರದ್ಧಾಂಜಲಿ ಹೇಳಿದ್ದಾರೆ.
ತಾನು ರತನ್ ಟಾಟಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದುದನ್ನು ಸಿಮಿ ಗರೆವಾಲ್ ಹಿಂದೊಮ್ಮೆ ಒಪ್ಪಿಕೊಂಡಿದ್ದರು.ಇದೀಗ ದೇಶ ಕಂಡ ಅಪ್ರತಿಮ ಕೈಗಾರಿಕೋದ್ಯಮಿಯ ನಿಧನದ ನಂತರ ತಮ್ಮ ಹೃತ್ಪೂರ್ವಕ ಗೌರವವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ ಸಿಮಿ ತಮ್ಮ ಸಾಂಪ್ರದಾಯಿಕ ಟಾಕ್ ಶೋ ʼರೆಂಡೆಜುವಸ್ ವಿತ್ ಸಿಮಿ ಗರೆವಾಲ್ʼನಿಂದ ಟಾಟಾ ಅವರೊಂದಿಗಿದ್ದ ನಾಸ್ಟಾಲ್ಜಿಕ್ ಫೋಟೋವನ್ನು ಹಂಚಿಕೊಂಡರು. “ನೀವು ಹೋಗಿದ್ದೀರಿ ಎಂದು ಹೇಳುತ್ತಿದ್ದಾರೆ. ನಿಮ್ಮ ನಷ್ಟವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ… ತುಂಬಾ ಕಷ್ಟ.. ವಿದಾಯ ನನ್ನ ಸ್ನೇಹಿತ..” ಎಂದು ಬರೆದಿದ್ದಾರೆ.
They say you have gone ..
— Simi_Garewal (@Simi_Garewal) October 9, 2024
It's too hard to bear your loss..too hard.. Farewell my friend..#RatanTata pic.twitter.com/FTC4wzkFoV