ತ್ವಚೆಯ ಬಗ್ಗೆ ಆರೈಕೆಯನ್ನು ವಹಿಸುವವರ ಸಂಖ್ಯೆ ಹೆಚ್ಚಿದೆ. ತ್ವಚೆಯಲ್ಲಿ ಯಾವುದೇ ರೀತಿಯ ಕಲೆಗಳು ಮೊಡವೆಗಳು ಇರಬಾರದು, ಕಲೆರಹಿತ ತ್ವಚೆ ನಮ್ಮದಾಗಬೇಕು ಎಂದು ಹೆಚ್ಚು ಜನ ಬಯಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ರೀತಿಯ ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ,ಸ್ಕ್ರಬ್ಬ ಯೂಸ್ ಮಾಡ್ತಾರೆ ಹಾಗೂ ಕೆಲವರು ಸಲೂನ್ ಗೆ ಹೋಗಿ ದುಬಾರಿ ಖರ್ಚು ಮಾಡುತ್ತಾರೆ.ಇದೆಲ್ಲದರ ಜೊತೆ ನಾವು ತಿನ್ನುವಂತ ಆಹಾರ ತುಂಬಾ ಮುಖ್ಯ.ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ದೇಹಕ್ಕೆ ಒದಗಿದರೆ ತ್ವಚೆ ಚೆನ್ನಾಗಿರುತ್ತದೆ..ಈ ಹಣ್ಣುಗಳನ್ನು ತಿನ್ನುವುದರಿಂದ ತ್ವಚೆ ಆರೋಗ್ಯ ಉತ್ತಮವಾಗಿರುತ್ತದೆ.
ದಾಳಿಂಬೆ ಹಣ್ಣು
ದಾಳಿಂಬೆ ಹಣ್ಣು ಅಥವಾ ದಾಳಿಂಬೆ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮುಖ್ಯವಾಗಿ ದೇಹದಲ್ಲಿ ಬ್ಲಡ್ ಹೆಚ್ಚಾಗುತ್ತದೆ. ಹಾಗೂ ತ್ವಚೆಗೆ ಒಳ್ಳೆಯದು ಕಾರಣ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ, ಹಾಗೂ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಅಂದ್ರೆ ಸ್ಟ್ರಾಬೆರಿ ಬ್ಲಾಕ್ ಬರಿ ಬ್ಲೂ ಬೆರಿ ಇವುಗಳನ್ನ ತಿನ್ನುವುದರಿಂದ ತ್ವಚೆಗ ಒಳ್ಳೆಯದು. ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಹಾಗೂ ಫ್ರೀ ರಾಡಿಕಲ್ ನಿಂದ ತ್ವಚೆಯನ್ನ ಕಾಪಾಡುತ್ತದೆ.
ಪಪ್ಪಾಯ
ಹೆಚ್ಚು ಜನ ಪಪ್ಪಾಯ ಹಣ್ಣಿನ ಫೇಸ್ ಪ್ಯಾಕ್ ಗಳನ್ನ ಬಳಸುತ್ತಾರೆ. ಆದರೆ ಈ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು,ತ್ವಚೆಗೂ ಉತ್ತಮ. ಇದರಲ್ಲಿರುವಂತಹ ಪಪ್ಪಾಯಿನ್ ಅಂಶ ತ್ವಚೆಯ ಹೊಳಪನ್ನು ಹೆಚ್ಚು ಮಾಡುತ್ತದೆ, ಕಲೆರಹಿತ ತ್ವಚೆ ನಿಮ್ಮದಾಗುತ್ತದೆ.