ಉದ್ದವಾದ ದಟ್ಟವಾದ ಕೂದಲು ನಮ್ಮದಾಗಬೇಕು ಅಂತ ಹೇಳ್ಬಿಟ್ಟು ಪ್ರತಿಯೊಬ್ಬರೂ ಕೂಡ ಆಸೆ ಪಡ್ತಾರೆ ಹಾಗಿದ್ರೆ ಕೂದಲ ಆರೈಕೆ ಮಾಡುವುದು ಕೂಡ ತುಂಬಾನೇ ಮುಖ್ಯ. ಅದರಲ್ಲೂ ವಾರಕ್ಕೆ ಎರಡು ಬಾರಿ ಕೂದಲಿಗೆ ತಪ್ಪದೆ ಎಣ್ಣೆಯನ್ನು ಹಚ್ಚಿ ನಂತರ ತಲೆಕೆ ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಉತ್ತಮವಾಗಿರುತ್ತದೆ ಹಾಗೂ ದಟ್ಟವಾದ ಕೂದಲು ನಿಮ್ಮದಾಗುತ್ತದೆ.
ಕೂದಲಿಗೆ ಹಚ್ಚಲು ಕೊಬ್ಬರಿ ಎಣ್ಣೆ , ಆಲಿವ್ ಆಯಿಲ್, ಬದಾಮ್ ಆಯಿಲ್ ಹೀಗೆ ಸಾಕಷ್ಟು. ಆದರೆ ಇವುಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ ದಶಕಗಳಿಂದಲೂ ನಮ್ಮ ಹಿರಿಯರು ಹರಳೆಣ್ಣೆಯನ್ನೆ ಕೂದಲಿಗೆ ಬಳಸುತ್ತಿದ್ರು.ಹರಳೆಣ್ಣೆಯನ್ನು ಕೂದಲಿಗೆ ಹಚ್ಚಿಸುವುದು ತುಂಬಾ ಒಳ್ಳೆಯದು ಎಂಬುದು ಸಾಕಷ್ಟು ಜನರ ಅಭಿಪ್ರಾಯ ಏನೆಲ್ಲಾ ಪ್ರಯೋಜನವಿದೆ ಎಂಬುವುದರ ಮಾಹಿತಿ ಇಲ್ಲಿದೆ.
ಕೂದಲ ಬೆಳವಣಿಗೆಗೆ ಉತ್ತಮ:
ಹರಳೆಣ್ಣೆ ಬಳಸುವುದರಿಂದ ಕೂದಲಿನಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಹೇರ್ ಫಾಲ್ ತಕ್ಷಣಕ್ಕೆ ಕಡಿಮೆಯಾಗುತ್ತದೆ.ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಹಾಗೂ ಮುಖ್ಯವಾಗಿ ಕೂದಲಿನ ರಚನೆಯನ್ನು ಸುಧಾರಿಸುತ್ತದೆ.
ನೆತ್ತಿಯ ಆರೋಗ್ಯಕ್ಕೇ ಒಳ್ಳೆಯದು
ನೆತ್ತಿಯ pH ಅನ್ನು ಸಮತೋಲನಗೊಳಿಸಲು ಹರಳೆಣ್ಣೆ ತುಂಬಾನೆ ಒಳ್ಳೆಯದು. ಡ್ಯಾಂಡ್ರಫ್ ಮತ್ತು ಫ್ಲೇಕಿಂಗ್ ಅನ್ನು ಕಡಿಮೆ ಮಾಡುತ್ತದೆ. ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡುತ್ತದೆ.ಹಾಗೂ ಮುಖ್ಯವಾಗಿ ತುರಿಕೆ ಮತ್ತು ಕಿರಿಕಿರಿಯನ್ನು ಶಮನಗೊಳಿಸುತ್ತದೆ.
ಕೂದಲಿನ ಹೊಳಪು ಹೆಚ್ಚುತ್ತದೆ.
ಆಗಾಗ ಹರಳೆಣ್ಣೆ ಹಚ್ಚಿದರೆ ಒಣ ಕೂದಲನ್ನು ಹೈಡ್ರೇಟ್ ಮಾಡಲು ತುಂಬಾನೆ ಸಹಾಯಕಾರಿ,ಕೂದಲನ್ನು ಮೃದುಗೊಳಿಸುತ್ತದೆ,ಕೂದಲನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕೂದಲ ಶೈನ್ ಮತ್ತು ಹೊಳಪನ್ನ.