ಹೊಸ ಹೊಸ ಹಾಗೂ ವಿಭಿನ್ನ ಬಗೆಯ ಫೂಟ್ ವೇರ್ ಗಳನ್ನ ಧರಿಸಬೇಕು ಎಂಬುದು ಹೆಚ್ಚು ಜನರ ಆಸೆ ಆಗಿರುತ್ತೆ. ಅದರಲ್ಲೂ ಕೆಲವರಂತೂ ಬಟ್ಟೆಗೆ ಮ್ಯಾಚ್ ಆಗುವಂತ ಶೂಸ್ ತಗೊಳ್ತಾರೆ ಹಾಗೂ ಟ್ರೆಂಡ್ ಚೇಂಜ್ ಆಗ್ತಾ ಇದ್ದಂತೆ ಫೂಟ್ ವೇರ್ ನ ಕೂಡ ಚೇಂಜ್ ಮಾಡ್ತಾರೆ.. ಕೆಲವರು ಸಿಂಪಲ್ ಫೂಟ್ ವೇರ್ ಗಳನ್ನು ಧರಿಸಿದರೆ ಇನ್ನೂ ಕೆಲವರು ತುಂಬಾ ಗ್ರಾಂಡ್ ಆಗಿರುವಂತಹ ಹಾಗೂ ಡಿಸೈನ್ ಹೆಚ್ಚಿರುವಂತಹ ಫೂಟ್ ವೇರ್ ಗಳನ್ನು ಧರಿಸುತ್ತಾರೆ ಹಾಗೂ ಬ್ರಾಂಡೆಡ್ ಫೂಟ್ ವೇರ್ ಗಳ ಕ್ರೇಜ್ ಕೂಡ ಹೆಚ್ಚು ಜನಕ್ಕೆ ಇರುತ್ತೆ..
ಅದರಲ್ಲೂ ಮದುವೆ ಸಂದರ್ಭದಲ್ಲಿ ಮದುಮಗಳಿಗೆ ಅಂತಾನೇ ವಿಭಿನ್ನ ರೀತಿಯ ಫುಟ್ ವೇರ್ ಬಂದಿವೆ.ಹೆಣ್ಣು ಮಕ್ಕಳು ತಮಗೆ ಬೇಕಾದಾಗೆ ಅಲಂಕಾರ ಮಾಡಿಕೊಂಡು ಸುಂದರವಾದ ಬಟ್ಟೆಗಳನ್ನು ಧರಿಸುತ್ತಾರೆ.ಆದರೆ ನಾವು ನಡಿಬೇಕಾದ್ರೆ ನಮ್ಮ ಪಾದರಕ್ಷೆಗಳನ್ನ ಕೂಡ ನೋಡುಲು ಹೆಚ್ಚು ಜನ ಇರ್ತಾರೆ.. ಯಾವ ರೀತಿಯ ಸ್ಲಿಪ್ಪರ್ಸ್ ನ (slippers)ವೇರ್ ಮಾಡಿದ್ದಾರೆ ಅನ್ನೋದು ಕೂಡ ಗಮನಹರಿಸುವವರ ಸಂಖ್ಯೆ ಜಾಸ್ತಿಯಾಗಿದೆ ಅಂತಾರೆ.
ಸೀರೆಗೆ ಒಂದು ರೀತಿಯ ಚಪ್ಪಲಿಗಳು ಸಿಕ್ಕಿದ್ರೆ , ಲೆಹಂಗಾಗೆ ಮತ್ತೊಂದು ರೀತಿಯ ಫುಟ್ ವೇರ್ ಸಿಗತ್ತೆ.ಹೀಗೆ ಸಂಗೀತ್ ಗೆ, ರಿಸೆಪ್ಶನ್ ಗೆ (reception )ಹಳದಿಗೆ ಪ್ರತಿಯೊಂದು ಇವೆಂಟ್ ಗೂ ಕೂಡ ಹೊಸ ಹಾಗೂ ವಿಭಿನ್ನ ರೀತಿಯ ಫೂಟ್ ವೇರ್ ಕಲೆಕ್ಷನ್ ಗಳು ಲಭ್ಯವಿದೆ..
ಸ್ಟೋನ್ ವರ್ಕ್ ಇರುವ ಫುಟ್ ವೇರ್ ತುಂಬಾ ನೆ ಗ್ರಾಂಡ್ ಆಗಿ ಕಾಣಿಸುತ್ತದೆ..ಹೆಚ್ಚಾಗಿ ನೈಟ್ ರಿಸೆಪ್ಶನ್, ಸಂಗೀತ್ ಕಾರ್ಯಕ್ರಮದಲ್ಲಿ ವೇರ್ ಮಾಡಿದ್ರೆ ಲುಕ್ ಹೆಚ್ಚು.ಅದರಲ್ಲೂ ನಿಮಗೆ ಹೀಲ್ಸ್ ಮತ್ತು ಫ್ಲ್ಯಾಟ್ಸ್ ಎರಡು ಕೂಡ ಸಿಗುತ್ತದೆ.
ಎಂಬ್ರಾಯ್ಡರಿ ವರ್ಕ್ ಇರುವಂತಹ ವೈಬ್ರಿಕ್ ಕಲರ್ ಹೆಚ್ಚು ಬಳಸಿರುವಂತಹ ಫೂಟ್ ವರ್ಕ್ ಗಳು ಕೂಡ ಲಭ್ಯವಿದೆ. ಇವುಗಳನ್ನ ಅರಿಶಿನ ಶಾಸ್ತ್ರದ ಟೈಮ್ ನಲ್ಲಿ ಬಳಸಿದರೆ ಅದ್ಭುತವಾಗಿ ಕಾಣಿಸುತ್ತೆ.
ಚಮ್ಕಿ ಹಾಗೂ ಮುತ್ತುಗಳನ್ನ ಬಳಸಿ ಚಪ್ಪಲಿಗಳನ್ನು ತಯಾರಿಸುತ್ತಾರೆ ಇವುಗಳನ್ನ ಮುಹೂರ್ತದ ಸಂದರ್ಭದಲ್ಲಿ ವೇರ್ ಮಾಡಿದ್ರೆ ಟ್ರೆಡಿಷನಲ್ ಲುಕ್ ಗೆ ಮ್ಯಾಚ್ ಆಗುತ್ತೆ.
ಇನ್ನೂ ಈ ಚಪ್ಪಲಿಗಳ ಕಾಸ್ಟ್ ಬಗ್ಗೆ ಕೇಳ್ತಾ ಹೋದ್ರೆ 2000 ಕಿಂತ ಕಡಿಮೆಯಂತು ಪಕ್ಕ ನಿಮಗೆ ಸಿಗಲ್ಲ ಏನಾದ್ರೂ ಕಡಿಮೆಗೆ ಸಿಕ್ರು ಕೂಡ ವರ್ಕ್ ಅಷ್ಟೊಂದು ಇರಲ್ಲ ಬಟ್ ಗ್ರಾಂಡ್ ಲುಕ್ ನೀಡೋದು ಪಕ್ಕ