
ತ್ರಿಶೂರ್ (ಕೇರಳ): ಕೇರಳದ ತ್ರಿಶ್ಶೂರ್ ಜಿಲ್ಲೆಯ ಕುಥಿರಾನ್ ರಾಷ್ಟ್ರೀಯ ಹೆದ್ದಾರಿ (National Highway)ಬಳಿ ಹಗಲು ದರೋಡೆ ನಡೆಸಿದ (Robbed)ದುಷ್ಕರ್ಮಿಗಳ ತಂಡವು ಆಭರಣ ವ್ಯಾಪಾರಿ ಮತ್ತು ಅವರ ಸ್ನೇಹಿತನ (Attack )ಮೇಲೆ ಹಲ್ಲೆ ನಡೆಸಿ 2.5 ಕೆಜಿ ಚಿನ್ನಾಭರಣಗಳನ್ನು (Gold jewelry)ದೋಚಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ತನ್ನ ಸ್ನೇಹಿತನೊಂದಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿದ್ದ ವ್ಯಾಪಾರಿಯನ್ನು ದುಷ್ಕರ್ಮಿಗಳು ಎರಡು ಕಾರುಗಳಲ್ಲಿ ಹಿಂಬಾಲಿಸಿದ್ದಾರೆ.

ಈ ಕಾರುಗಳು ನಡುರಸ್ತೆಯಲ್ಲಿ ವ್ಯಾಪಾರಿಯ ಕಾರನ್ನು ತಡೆದು ಅವರ ಮೇಲೆ ಚಾಕು ಮತ್ತು ಕೊಡಲಿಯಿಂದ ದಾಳಿ ಮಾಡಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವ್ಯಾಪಾರಿಯನ್ನು ಅರುಣ್ ಸನ್ನಿ ಎಂದು ಗುರುತಿಸಲಾಗಿದ್ದು, ತ್ರಿಶೂರ್‌ನ ಕಿಜಕ್ಕೆಕೊಟ್ಟಾ (Thrissur Kijakkotta)ಮೂಲದವರಾಗಿದ್ದು, ಅವರ ಸ್ನೇಹಿತ ರೋಜಿ ಥಾಮಸ್ ಪೊಟ್ಟಾ( Rosie Thomas Potta(ನಿವಾಸಿಯಾಗಿದ್ದಾರೆ.

ಈ ಕುರಿತು ಪೀಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶೋಧ ನಡೆಸಲಾಗಿದೆ. ಕೇರಳ ಪೊಲೀಸರ ಪ್ರಕಾರ, ಬುಧವಾರ ಬೆಳಗ್ಗೆ 11:15ರ ಸುಮಾರಿಗೆ ವ್ಯಾಪಾರಿ ಮತ್ತು ಆತನ ಸ್ನೇಹಿತ ಕೊಯಮತ್ತೂರಿನಿಂದ ತ್ರಿಶೂರ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿ, ದಾಳಿ ನಡೆಸಿ, 2.5 ಕೆಜಿ ಚಿನ್ನಾಭರಣಗಳನ್ನು ದೋಚಿಕೊಂಡು ಅಪಹರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವ್ಯಾಪಾರಿಯ ಕಾರನ್ನು ತಡೆದ ದುಷ್ಕರ್ಮಿಗಳು ಆತನನ್ನು ಮತ್ತು ಆತನ ಸ್ನೇಹಿತನನ್ನು ಕೆಳಗಿಳಿಯುವಂತೆ ಹೇಳಿದ್ದಾರೆ.
ನಂತರ ಬೇರೆ ಕಾರಿನಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಪುತ್ತೂರಿನ ವರ್ಕ್‌ಶಾಪ್‌ನಿಂದ ಗ್ಯಾಂಗ್‌ನ ಒಂದು ಕಾರು ಪತ್ತೆ ಮಾಡಿದರು. ತನಿಖೆ ನಡೆಸಿದಾಗ ಎರಡೂ ಕಾರುಗಳ ನಂಬರ್ ಪ್ಲೇಟ್ ನಕಲಿ ಎಂಬುದು ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೀಚಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




