ಭುವನೇಶ್ವರ: ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬುವವರನ್ನು ಬರ್ಬರವಾಗಿ ಕೊಂದ ಪ್ರಕರಣದ ಪ್ರಮುಖ ಶಂಕಿತ ವ್ಯಕ್ತಿಯೊಬ್ಬ ಭದ್ರಕ್ ಜಿಲ್ಲೆಯಲ್ಲಿ ಮೃತಪಟ್ಟಿರುವುದನ್ನು ಒಡಿಶಾ ಪೊಲೀಸರು ಬುಧವಾರ ಪತ್ತೆ ಮಾಡಿದ್ದಾರೆ
ಮೃತ ಪುರುಷ ಮುಕ್ತಿ ರಂಜನ್ ರೇ ಅವರದ್ದು ಎಂದು ನಂಬಲಾದ ಡೈರಿಯನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಅದರಲ್ಲಿ ಫ್ರಿಡ್ಜ್‌ನಲ್ಲಿ ಛಿದ್ರಗೊಂಡ ಶವ ಪತ್ತೆಯಾದ ಮಹಿಳೆಯನ್ನು ಕೊಂದಿರುವುದಾಗಿ ಅವನು ಒಪ್ಪಿಕೊಂಡಿದ್ದಾನೆ.
ಉನ್ನತ ಪೋಲೀಸ್ ಮೂಲಗಳ ಪ್ರಕಾರ ಮಹಾಲಕ್ಷ್ಮಿ ಮತ್ತು ರಂಜನ್ ರೇ ಇಬ್ಬರೂ ಪ್ರೀತಿಸುತಿದ್ದು ರಿಲೇಷನ್ ಶಿಪ್ ನಲ್ಲಿ ಇದ್ದರು. ಆದರೆ ಮೂರು ತಿಂಗಳಿನಿಂದ ಮಹಾಲಕ್ಷ್ಮಿ ಮತ್ತೊಬ್ಬ ಯುವಕನ ಜತೆ ಸಂಪರ್ಕದಲ್ಲಿರುವುದು ರಂಜನ್ ಗಮನಕ್ಕೆ ಬಂದಿತ್ತು. ಅವನು ಯಾರೊಂದಿಗೂ ಸಂಪರ್ಕ ಇಟ್ಟುಕೊಳ್ಳದಂತೆ ತಾಕೀತು ಮಾಡಿದ್ದ. ಆದರೆ ಮಹಾಲಕ್ಷ್ಮಿ ಅವನ ಮಾತನ್ನು ಕಡೆಗಣಿಸಿದ್ದಳು ಇದರಿಂದ ಆಕ್ರೋಶಿತನಾದ ರಂಜನ್ ಸೆಪ್ಟೆಂಬರ 2 ರಂದು ಮಹಾಲಕ್ಷ್ಮಿ ಮನೆಗೆ ರಾತ್ರಿ 9 ಘಂಟೆಗೆ ಬಂದಿದ್ದ. ಇದೇ ವಿಚಾರವಾಗಿ ಇಬ್ಬರಿಗೂ ಜಗಳವಾಗಿದೆ. ಈ ವೇಳೆ ಆರೋಪಿ ಚಾಕುವಿನಿಂದ ಎದೆ ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾನೆ. ಮೊದಲು ಶವವನ್ನು ಸೂಟ್ ಕೇಸ್ ನಲ್ಲಿ ಸಾಗಿಸಲು ಸೂಟ್ ಕೇಸ್ ಕೂಡ ತಂದಿಟ್ಟಿದ್ದಾನೆ. ಆದರೆ ಶವ ಸಾಗಾಟ ಕಷ್ಟ ಎಂದು ಅರಿತು ಶವವನ್ನು 59 ಚೂರುಗಳನ್ನಾಗಿ ತುಂಡರಿಸಿ 165 ಲೀಟರ್ ಫ್ರಿಜ್ ನಲ್ಲಿ ತುಂಬಿಸಿದ್ದ. ಇಡೀ ಕೊಠಡಿಯಲ್ಲಿ ಚೆಲ್ಲಿದ ರಕ್ತವನ್ನು ರಾತ್ರಿಯಿಡೀ ಚೆನ್ನಾಗಿ ಒರೆಸಿ ಕುರುಹು ಸಿಗದಂತೆ ಒರೆಸಿ ಬೆಳಿಗ್ಗೆ ಅಲ್ಲಿಂದ ತನ್ನ ಸ್ಕೂಟರ್ ನಲ್ಲಿ ಪರಾರಿ ಆಗಿದ್ದ. ಮಾನವ ಶರೀರದಲ್ಲಿ ಅಂದಾಜು 4- 5 ಲೀಟರ್ ರಕ್ತ ಇರುತ್ತದೆ. ಇವನು ದೇಹವನ್ನು ತುಂಡರಿಸಿದ್ದರಿಂದ ಇಡೀ ರಕ್ತ ಕೊಠಡಿಯಲ್ಲಿ ಹರಡಿದ್ದು ಅದನ್ನು ತೆಗೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾನೆ. ಆದರೂ ಇವನು ತೆರಳಿದ ನಂತರ ಫ್ರಿಜ್ ನಿಂದ ಮತ್ತಷ್ಟು ರಕ್ತ ಸೋರಿತ್ತು ಎಂದು ಪೋಲೀಸರು ಹೇಳಿದ್ದಾರೆ.

ಆರೋಪಿ ತನ್ನ ಸ್ವಗ್ರಾಮ ಭೂತಕಪುರದ ಸಮೀಪದ ಕಳೆಪಾ ಸ್ಮಶಾನದ ಬಳಿ ಬದುಕು ಅಂತ್ಯಗೊಳಿಸಿದ್ದಾನೆ. ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾನೆ ಅನ್ನೋ ಮಾಹಿತಿ ಮೇರೆಗೆ ಪೊಲೀಸರು ಪಶ್ಚಿಮ ಬಂಗಾಳಕ್ಕೂ ತೆರಳಿದ್ದ. ಮೊಬೈಲ್ ಫೋನ್ ಬಳಸದೆ ತಿರುಗಾಡುತ್ತಿದ್ದ ಈತ, ಒಡಿಶಾದ ಭದ್ರಾಕ್ ಜಿಲ್ಲೆಗೆ ಮರಳಿದ್ದ. ಒಡಿಶಾದ ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್ ಮನೆಗೆ ಮರಳಿದ್ದರೂ ಸೈಲೆಂಟ್ ಆಗಿದ್ದ. ನಿನ್ನೆ ರಾತ್ರಿ ಭದ್ರಕ್‌ಗೆ ತೆರಳುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಸ್ಕೂಟಿ ಮೂಲಕ ಈತ ತೆರಳಿದ್ದ. ಮೊಬೈಲ್ ಇಲ್ಲದ ಕಾರಣ ಈತ ಲ್ಯಾಪ್‌ಟಾಪ್ ಒಯ್ದಿದ್ದ. ಸ್ಕೂಟಿಯಲ್ಲಿ ಲ್ಯಾಪ್‌ಟಾಪ್ ಇಟ್ಟು ಕುಳೆಪಾ ಸ್ಮಶಾನದ ಬಳಿ ಬದುಕು ಅಂತ್ಯಗೊಳಿಸಿದ್ದಾನೆ.
ಬುಧವಾರ ಬೆಳಗಿನ ಜಾವದಿಂದಲೂ ದಾರಿ ಪಕ್ಕದಲ್ಲಿ ಸ್ಕೂಟಿ ಹಾಗೂ ಲ್ಯಾಪ್‌ಟಾಪ್ ಗಮನಿಸಿದ ಸ್ಥಳೀಯರು ಅಕ್ಕ ಪಕ್ಕ ಹುಡುಕಾಡಿದ್ದಾರೆ. ಈ ವೇಳೆ ಮರದ ಬಳಿ ಮೃತದೇಹ ಪತ್ತೆಯಾಗಿದೆ. ಸ್ಛಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಆರ್‌ಡಿ ಪಂಡಿಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಒಡಿಶಾದ ಧುಸುರಿ ಪೊಲೀಸ್ ಠಾಣಾ ವ್ಯಾಪ್ತಿಯ ಭುಯಿನ್‌ಪುರ ಗ್ರಾಮದ ನಿವಾಸಿ ರೇ (30) ಮಹಿಳೆಯ ಕೊಲೆಯ ಪ್ರಮುಖ ಆರೋಪಿ ಎಂದು ಭದ್ರಕ್ ಎಸ್‌ಪಿ ವರುಣ್ ಗುಂಟುಪಲ್ಲಿ ತಿಳಿಸಿದ್ದಾರೆ. ಹಿಂದಿನ ದಿನ, ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರು ಒಡಿಶಾದಲ್ಲಿ ಶಂಕಿತನ ಉಪಸ್ಥಿತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಮತ್ತು ಪ್ರಕರಣವನ್ನು ಭೇದಿಸಲು ರಚಿಸಲಾದ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು. “ನಾವು ಭದ್ರಕ್ ಜಿಲ್ಲೆಯಲ್ಲಿ ಮುಕ್ತಿ ರಂಜನ್ ರೇ ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಎಂದು ಧುಸುರಿ ಪೊಲೀಸ್ ಠಾಣೆ ಐಐಸಿ, ಸಂತನು ಜೆನಾ ತಿಳಿಸಿದ್ದಾರೆ.
ರೇ ಅವರ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಅದರಲ್ಲಿ ಬೆಂಗಳೂರು ಯುವತಿಯನ್ನು ಕೊಂದ ನಂತರ ಆಕೆಯ ದೇಹವನ್ನು 59 ತುಂಡುಗಳಾಗಿ ತುಂಡರಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಹೇಳಿದರು. ವರದಿ. – ಕೋವರ್ ಕೊಲ್ಲಿ ಇಂದ್ರೇಶ್











