ಕಾವೇರಿ ಆರತಿ ಅಧ್ಯಾಯನ ಆಯೋಗ ವಾರಾಣಸಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದು, ಎರಡು ದಿನಗಳ ಕಾಲ ಕಾವೇರಿ ಆರತಿ ಬಗ್ಗೆ ಅಧ್ಯಾಯನ ಮಾಡಿದ್ವಿ. ಸಿಎಂ ಸೂಚನೆ ಮೇರೆಗೆ ವರದಿಯನ್ನ ಸಿದ್ದಪಡಿಸಲು ಬಂದಿದ್ದೀವಿ. ಹರಿದ್ವಾರ, ವಾರಾಣಸಿಯಲ್ಲಿ ವಿಭಿನ್ನ ಅನುಭವ ಆಗಿದೆ. ಹರಿದ್ವಾರದಲ್ಲಿ ಸರ್ಕಾರದ ಅನುದಾನ ಪಡೆಯದೆ ದಾನಿಗಳ ಸಹಕಾರದಿಂದ ಗಂಗಾ ಆರತಿ ಮಾಡಲಾಗ್ತಿದೆ ಎಂದಿದ್ದಾರೆ.
ಗಂಗಾ ನದಿ ಸುಮಾರು 2 ಸಾವಿರ ಕಿಲೋ ಮೀಟರ್ ಹರಿಯತ್ತದೆ. ಆದರೆ ಕಾವೇರಿ ನದಿ ಕಡಿಮೆ ದೂರ ಹರಿದರೂ ಕೂಡ ಸೌಂಡ್ ಮಾತ್ರ ಜೋರಾಗಿದೆ. ತಮಿಳುನಾಡು ಜೊತೆ ಕಾವೇರಿ ವ್ಯಾಜ್ಯ ಇಲ್ಲದೆ ಅಚ್ಚುಕಟ್ಟಾಗಿ KRS ಡ್ಯಾಂಗೆ ನೀರು ತುಂಬಲಿ ಅಂತಾ ಕಾವೇರಿ ಆರತಿಯನ್ನ ಮಾಡಲಿದ್ದೇವೆ ಎಂದಿದ್ದಾರೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ.
ಕಾವೇರಿ ಆರತಿಯನ್ನು ಯಾವ ಜಾಗದಲ್ಲಿ ಮಾಡಬೇಕು ಅಂತ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತಿವಿ. ಇನ್ನು ಕೂಡ ಅಧಿಕಾರಿಗಳು ಮತ್ತೆ ಗಂಗಾರತಿ ಬಗ್ಗೆ ಅಧ್ಯಾಯನ ಮಾಡಬೇಕಾದ ಅವಶ್ಯಕತೆ ಇದೆ. ಇತಿಹಾಸದಲ್ಲಿ ಉಳಿಯುವಂತದ್ದು ಕಾವೇರಿ ಆರತಿ ಹೀಗಾಗಿ ಮತ್ತೆ ಅಧಿಕಾರಿಗಳು ಬಂದು ಅಧ್ಯಯನ ಮಾಡಲಿದ್ದಾರೆ ಎಂದಿದ್ದಾರೆ.
KRS ಬೃಂದಾವನವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಅಪ್ ಗ್ರೇಡ್ ಮಾಡ್ತಿದ್ದೀವಿ. ಹಿಗಾಗಿ ಕಾವೇರಿ ಆರತಿ ಎಲ್ಲಿ ಮಾಡಬೇಕು ಅಂತ ನಿರ್ಧಾರ ಮಾಡ್ತಿವಿ. ದಸರಾ ಒಳಗಾಗಿ ಕಾವೇರಿ ಆರತಿ ಮಾಡಬೇಕು ಅಂದುಕೊಂಡಿದ್ದೀವಿ. ಆದ್ರೆ ಅದು ಕಷ್ಟ ಆಗಬಹುದು. ಸಾಂಕೇತಿಕವಾಗಿ ಆದರೂ ಕಾವೇರಿ ಆರತಿ ಮಾಡಲು ಪ್ರಯತ್ನ ಮಾಡ್ತಿವಿ. ಕಾವೇರಿ ಆರತಿಯಲ್ಲಿ ನಾವು ರಾಜಕೀಯ ಮಾಡಲ್ಲ ಎಂದಿದ್ದಾರೆ. ಯಾರಾದರೂ ಆ ರೀತಿಯ ರಾಜಕೀಯ ಮಾಡಿದ್ರೆ ಅದನ್ನ ಕಾವೇರಿ ಮಾತೆಯೇ ನೋಡಿಕೊಳ್ಳಲಿ ಎಂದಿದ್ದಾರೆ.