ಮಂಡ್ಯ: ನಾಗಮಂಗಲ ಗಣೇಶ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲದ ಬದ್ರಿಕೊಪ್ಪಲಿಗೆ ಕೇಂದ್ರ ಸಚಿವ H.D ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಗಲಭೆ ಬಳಿಕ ಎರಡನೇ ಬಾರಿಗೆ ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಗಲಭೆ ಬಳಿಕ ಬಂಧನದ ಭೀತಿಯಿಂದ ಯುವಕರು ಊರು ತೊರೆದಿದ್ದು, ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಕುಮಾರಸ್ವಾಮಿ ಮತ್ತೊಮ್ಮೆ ಆಗಮಮಿಸಿದ್ದಾರೆ. ಇದಕ್ಕೂ ಮೊದಲು ಹಾನಿ ಸ್ಥಳಗಳಿಗೆ ಭೇಟಿ ನೀಡಿದ್ದರು.
ಬದ್ರಿಕೊಪ್ಪಲಿನ ಜನರಿಗೆ ಕುಮಾರಸ್ವಾಮಿ ನೆರವಿನ ಭರವಸೆ ನೀಡಿದ್ದಾರೆ. ಜನರ ಸಮಸ್ಯೆ ಆಲಿಸಿದ ಬಳಿಕ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ಆಮಿ ಧನ ಸಹಾಯ ಮಾಡಿದ್ದಾರೆ. ನಾಗಮಂಗಲ ಗಲಭೆ ಹಿನ್ನೆಲೆ ಬದ್ರಿಕೊಪ್ಪಲಿನ 13 ಜನ ಜೈಲು ಸೇರಿದ್ದರು. ಜೈಲು ಸೇರಿರುವ 13 ಜನ ಯುವಕರ ಕುಟುಂಬಕ್ಕೆ H.D ಕುಮಾರಸ್ಆಮಿ ಹಣದ ನೆರವು ನೀಡಿದ್ದಾರೆ. ಈ ನಡುವೆ ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ನಾಗಮಂಗಲ ಡಿವೈಎಸ್‌ಪಿ ಡಾ ಸುಮಿತ್ ಎ.ಆರ್ ಸಸ್ಪೆಂಡ್ ಮಾಡಿ ಮಂಡ್ಯ ಎಸ್‌ಪಿ ಮಲ್ಲಿಕಾರ್ಜು ಬಾಲದಂಡಿ ಆದೇಶ ಮಾಡಿದ್ದಾರೆ. ಇದಕ್ಕೂ ನಾಗಮಂಗಲ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು.
ನಾಗಮಂಗಲ ಗಲಭೆ ಬಗ್ಗೆ ಜಿಲ್ಲಾಡಳಿತದಿಂದ ವರದಿ ವಿಚಾರವಾಗಿ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದ್ದು, ಸರ್ಕಾರಕ್ಕೆ ವರದಿ ಬಂದಿದೆ, ಆದಷ್ಟು ಬೇಗ ಪರಿಹಾರ ಕೊಡ್ತೇವೆ ಎಂದಿದ್ದಾರೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ವಿಚಾರವಾಗಿ ಮಾತನಾಡಿ, ಮುಗಿದು ಹೋಗಿರುವ ವಿಚಾರ. ಅದನ್ನ ಇಲ್ಲಿಗೆ ಬಿಟ್ಟು ಬಿಡೋದು ಒಳ್ಳೆಯದು. ಪದೇ ಪದೇ ಹೋಗುವುದರಿಂದ ಏನು ಪ್ರಯೋಜನ. ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡ್ತೇವೆ ಎಂದಿದ್ದಾರೆ. ಸೈಲೆಂಟ್ ಆಗಿರೋದನ್ನ ದಿನ ಬೆಳಗ್ಗೆ ಎದ್ದು ಕೆದಕುತ್ತಿದ್ದಾರೆ ನಾನು ಏನು ಮಾಡೋಕ್ಕಾಗುತ್ತೆ. ಅವರಿಗೆ ಅವರೇ ಪರಿಹಾರ ಹುಡಿಕಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ವಿರುದ್ದ ಹಿಟ್ಲರ್ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಉತ್ತರ ಕೊಟ್ಟಿರುವ ಚಲುವರಾಯಸ್ವಾಮಿ, ಕೇಂದ್ರದ ಸಚಿವರು ತೂಕವಾಗಿ ಮಾತನಾಡಬಹುದು. ಅವರಿಗೆ ನಾವು ಉತ್ತರ ಕೊಡಬಹುದು. ಉತ್ತರ ಕೊಟ್ಟರೆ ನಮ್ಮ ವ್ಯಕ್ತಿತ್ವ ಹಾಳಾಗುತ್ತದೆ ಎಂದಿದ್ದಾರೆ. ಇನ್ನು ಶೋಭಾ, ಅಶೋಕ್‌ಗೆ ಬೇಕಿರೋದು ಸಾರ್ವಜನಿಕರ ಹಿತ, ಶಾಂತಿ ಅಲ್ಲ. ಇಬ್ಬರು ಸೇರಿ ಕೆರಗೋಡು ಗ್ರಾಮದಲ್ಲಿ ಶುರು ಮಾಡಿದರು. ಕೆ.ಆರ್.ಪೇಟೆಯಲ್ಲಿ, ಪಾಂಡವಪುರದಲ್ಲಿ ಪ್ರಯತ್ನ ಮಾಡಿದರು. ಅದ್ಯಾವುದು ಸಕ್ಸಸ್ ಆಗಲಿಲ್ಲ. ಈಗ ಮತ್ತೆ ನಾಗಮಂಗಲಕ್ಕೆ ಪದೇ ಪದೇ ಬರ್ತಿದ್ದಾರೆ. ಘರ್ಷಣೆಗೆ ಜೆಡಿಎಸ್‌ನ ಕೆಲವರು ಕುಮ್ಮಕ್ಕು ಕೊಡಲು ನಿಂತಿದ್ದಾರೆ. ನಮ್ಮ ಜಿಲ್ಲೆಯ ಜನ ಇದನ್ನ ಸಹಿಸಲ್ಲ ಎಂದಿದ್ದಾರೆ.