ಇದೇ ತಿಂಗಳು 12ನೇ ತಾರೀಖಿನಿಂದ 19ನೇ ತಾರೀಖಿನವರೆಗೆ ಹರಿಯಾಣದ ಪಂಚಕುಳದಲ್ಲಿ ನಡೆದ ಯೋನೆಕ್ಸ್ಸನ್ ರೈಸ್ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿಯ(Badminton tournament) 17 year)ವರುಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕೊಡಗಿನ ಬೊಪ್ಪಂಡ ದಿಯಾ (Boppanda Diya Bhimaiah)ಭೀಮಯ್ಯಡಬ್ಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಡಬ್ಬಲ್ಸ್ ವಿಭಾಗದಲ್ಲಿ ಹರಿಯಾಣದ ಬಾನುಲಿ ಪರುಸ್ವಾಲ್ ಜೊತೆಗೂಡಿ ಪ್ರಥಮ ಸ್ಥಾನವನ್ನುಗಳಿಸಿದ್ದಾರೆ.ದಿಯಾ ಭೀಮಯ್ಯ, ಮೈಸೂರಿನ ವಿದ್ಯಾಶ್ರಮ್ ಪಿ ಯು ಕಾಲೇಜಿನಲ್ಲಿ ಪ್ರಥಮ ಪಿ ಯೂ ಸಿ ವ್ಯಾಸಾಂಗ ಮಾಡುತಿದ್ದು, ಸ್ಪೋರ್ಟ್ಸ್ ಪಾರ್ಕ್ ಅಕಾಡಮಿಯಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬಿ.ಪಿ.ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.ದಿಯಾ ಮಡಿಕೇರಿಯ ದೇಚೂರಿನ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ಅವರ ಪುತ್ರಿ.