ಕಾಂಗ್ರೆಸ್ ಶಾಸಕ ಮುನಿರತ್ನ ಅವರನ್ನು ಜಾತಿನಿಂದನೆ ಕೇಸ್‌ನಲ್ಲಿ ಅರೆಸ್ಟ್ ಮಾಡಿರುವ ಪೊಲೀಸರು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಜೆಪಿ ನಾಯಕ ರವಿಕುಮಾರ್, ಆಡಿಯೋ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ. ಮುನಿರತ್ನ ಹೇಳಿದ್ರಾ..? ಅಥವಾ ಕಾಂಗ್ರೆಸ್ ಕ್ರಿಯೆಟ್ ಮಾಡಿದ್ದಾ..? ಎಲ್ಲಾ ಸತ್ಯಗಳು ಹೊರಬೇಕಿದೆ ಎಂದಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳೋದು ಬಿಜೆಪಿ ವರಿಷ್ಠ ನಾಯಕರು. ಈ ಬಗ್ಗೆ ರಾಜ್ಯಾಧ್ಯಕ್ಷರು ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಶಾಸಕ ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಆದರೆ ಯಾದಗಿರಿಯಲ್ಲಿ ಕಾಂಗ್ರೆಸ್ ಶಾಸಕರ ಮೇಲೆ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಇನ್ನು ಯಾಕೆ ಬಂಧನ ಮಾಡಿಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.
ಮುನಿರತ್ನ ಅವರು ಏನಾದ್ರೂ ಜಾತಿ ನಿಂದನೆ, ಧರ್ಮ ನಿಂದನೆ ಮಾಡಿದ್ರೆ ಅಕ್ಷಮ್ಯ ಅಪರಾಧ. ಎಪ್‌ಐಆರ್ ಆದ 10 ಗಂಟೆಯಲ್ಲಿ ಮುನಿರತ್ನ ಅವರನ್ನ ಬಂಧನ ಮಾಡಿದ್ದಾರೆ.. ಆದ್ರೆ ಯಾದಗಿರಿ ಎಂಎಲ್‌ಎ ಚನ್ನಾರೆಡ್ಡಿ ಅವರ ವಿರುದ್ದ ಅಟ್ರಾಸಿಟಿ ದಾಖಲಾದ್ರೂ ಬಂಧನ ಮಾಡಿಲ್ಲ.. ಶಾಸಕರಿಗೆ ಪೊಲೀಸ್ ಸೆಕ್ಯುರಿಟಿ ಕೊಡ್ತಾರೆ ಎಂದು ಅಣಕಿಸಿದ್ದಾರೆ.
ಮುನಿರತ್ನ ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ವಾಯ್ಸ್ ರೆಕಾರ್ಡ್‌ಗಳನ್ನು ಡುಪ್ಲಿಕೇಟ್ ಮಾಡ್ತಾರೆ. ಹಾಸ್ಯದಲ್ಲಿ ಒಬ್ಬ ಇದ್ದಾನೆ ಅಲ್ಲ ಎಷ್ಟು ಚೆಂದ್ ಮಾಡ್ತಾನೆ.. ಮಿಮಿಕ್ರಿ ಕಾಮಿಡಿ ಮಾಡ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಮುನಿರತ್ನ ಆಡಿಯೋ ಡುಪ್ಲಿಕೇಟ್ ಎಂದಿದ್ದಾರೆ ಯತ್ನಾಳ್..