ನಟ ದರ್ಶನ್ ಅವರು ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿಲ್ಲ ಎಂದು ಡಿ ಕಂಪನಿ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್ ಸ್ಪಷ್ಟನೆ ನೀಡಿದ್ದಾರೆ. ಡಿ ಬಾಸ್ ತಮ್ಮ ಕಷ್ಟಗಳು ದೂರಾಗಲಿ ಎಂದು ವಿಘ್ನ ಹರ ಮುದ್ರೆ ಮಾಡಿದ್ದಾರೆ. ಮಾಧ್ಯಮಗಳ ಅನಗತ್ಯ ಆರೋಪ ಮಾಡುತ್ತಿವೆ ಎಂದು ಡಿ ಕಂಪನಿ ತಿಳಿಸಿದೆ.
ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಲ್ಲಿ (Ballary Jail)ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸನ್ನೆ ಮಾಡಿದ್ದರು ಎಂಬ ದೃಶ್ಯ ವೈರಲ್ ಬೆನ್ನೆಲ್ಲೆ ನಟದ ಫ್ಯಾನ್ಗಳ ಅಧಿಕೃತ ಪುಟ ಡಿ ಕಂಪನಿ ಸ್ಪಷ್ಟನೆ ನೀಡಿದೆ. ಡಿ ಬಾಸ್ ಮಾಡಿದ್ದ ವಿಘ್ನ ಹರ ಮುದ್ರೆ ಹೊರತು ಅಸಹ್ಯಕರ ಸನ್ನೆಯಲ್ಲ ಎಂದು ಹೇಳಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗುರುವಾರ ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್ನಿಂದ ಹೊರ ಬರುವ ವೇಳೆ ಕ್ಯಾಮರಾಗಳಿಗೆ ಕೈ ಮಧ್ಯದ ಬೆರಳನ್ನು ಮುಂದೆ ಮಾಡಿ ಉಳಿದ ಬೆರಳುಗಳನ್ನು ಮಡಿಚಿಟ್ಟುಕೊಂಡಿದ್ದರು. ಇದು ಅಸಹ್ಯಕರ ಸನ್ನೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ದರ್ಶನ್ ನಡುವಳಿಕೆ ಸುಧಾರಿಸಿಲ್ಲ ಮಾಧ್ಯಮಗಳು ತನ್ನ ವಿರುದ್ಧ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಈ ರೀತಿ ಅಸಹನೆ ತೋರಿದ್ದಾರೆ ಎನ್ನಲಾಗಿತ್ತು. ಸದ್ಯ ಅಭಿಮಾನಿಗಳ ಸಂಘ ಸ್ಪಷ್ಟನೆ ನೀಡಿದೆ.
ಡಿ ಕಂಪನಿ ಫ್ಯಾನ್ ಪೇಜ್ ಸ್ಪಷ್ಟನೆ ಏನು?
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಡಿ ಕಂಪನಿ ಅಧಿಕೃತ ಪುಟ, ” ಮಾಧ್ಯಮಗಳು ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Box Office Sulthan Challenging Star Darshan Thoogadeepa) ಅವರ ವಿರುದ್ಧ ಸುಖಾ ಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಡಿ ಬಾಸ್ರವರು (D Boss) ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿರುವ ನಿಮಗೆ ನಮ್ಮ ಧಿಕ್ಕಾರ ” ಎಂದಿದ್ದಾರೆ.
“ಕೆಲ ಮಾಧ್ಯಮಗಳು ಸತ್ಯ ಹೇಳೊದು ನಾವೇ ಉತ್ತಮ ಸಮಾಜ ಕಟ್ಟೊದು ನಾವೇ ನಮ್ಮಿಂದಲೇ ಎಲ್ಲಾ ಅಂತಾ ಬೊಗಳೆ ಬಿಡುವ ಅವರಿಗೆ ಸತ್ಯಾಂಶ ತೋರಿಸದೆ ಮತ್ತೊಬ್ಬರ ಮೇಲೆ ಗೊಬೆ ಕೂರಿಸಿ ಇಲ್ಲ ಸಲ್ಲದ ಸುಳ್ಳುಗಳನ್ನು ತೋರಿಸಿ ಜನರ ದಿಕ್ಕು ತಪ್ಪಿಸಿದಾಗ ಮಾತ್ರ ಹೈಫೈ ಆಫೀಸ್ ಹೈಫೈ ಲೈಫ್ ” ಎಂದು ಬೇಸರ ಹೊರಹಾಕಿದೆ.
ಪತ್ನಿ, ಸಹೋದರ ಭೇಟಿ
ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಸೋದರ ದಿನಕರ್ ತೂಗುದೀಪ್, ಸಂಬಂಧಿ ಸುಶಾಂತ್ ನಾಯ್ಡು, ವಕೀಲ ಸುನೀಲ್ ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು. ಆರೋಪಿಯ ನ್ಯಾಯಾಂಗ ಬಂಧನ ಅವಧಿ ಗುರುವಾರ ಮುಕ್ತಾಯ ಹಿನ್ನೆಲೆ ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ದರ್ಶನ್ ವಿಚಾರಣೆಗೆ ಹಾಜರಾದರು. ವಿಚಾರಣೆ ಪೂರ್ಣಗೊಂಡ ಬಳಿಕ ಕುಟುಂಬಸ್ಥರ ಬೇಟಿಗೆ ಅವಕಾಶ ನೀಡಲಾಗಿತ್ತು. ಹೈ ಸೆಕ್ಯೂರಿಟಿ ಸೆಲ್ (High Security Cell) ನಿಂದ ವಿಸಿಟಿಂಗ್ ರೂಮ್ಗೆ ಮಧ್ಯಾಹ್ನ 12.26ಕ್ಕೆ ಬಂದ ದರ್ಶನ್ ಕುಟುಂಬಸ್ಥರು ಹಾಗೂ ವಕೀಲರೊಂದಿಗೆ ಕೇವಲ 24 ನಿಮಿಷ ಮಾತನಾಡಿದರು.
ಪ್ರಕರಣದ ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳು, ಸೆಷನ್ ನ್ಯಾಯಾಲಯಕ್ಕೆ ಸಲ್ಲಿಸಲಿರುವ ಜಾಮೀನು ಅರ್ಜಿ ಸೇರಿ ಮುಂದಿನ ನ್ಯಾಯಾಂಗ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ. ಪತ್ನಿ ತಂದ ಕಾಮಾಕ್ಯ ದೇವರ ಪ್ರಸಾದ, ಡ್ರೈಫ್ರೂಟ್ಸ್ (Dry Fruits), ಬಟ್ಟೆ (Dress), ಬ್ಯಾಗ್ (Bag)ಅನ್ನು ಪಡೆದ ದರ್ಶನ್ ಸೆಲ್ಗೆ ಮರಳಿದರು. ಸಂಜೆ 4ಕ್ಕೆ ವಕೀಲ ಸುನೀಲ್ ಹಾಗೂ ಅವರ ತಂಡ ಕಾರಾಗೃಹಕ್ಕೆ ಭೇಟಿ ನೀಡಿತ್ತು. ಹೈ ಸೆಕ್ಯೂರಿಟಿ ಸೆಲ್ನಿಂದ ವಿಸಿಟರ್ ರೂಮ್ಗೆ(Visitor Room) ಜೈಲಾಧಿಕಾರಿಗಳು ಸೇರಿ ಐವರು ಸಿಬ್ಬಂದಿ ಭದ್ರತೆಯಲ್ಲಿ ಬಂದ ದರ್ಶನ್ ಮಧ್ಯದ ಬೆರಳನ್ನು(Middle Finger) ತೋರಿಸಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಕಾರಾಗೃಹದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್ ಪರ ವಕೀಲ ಸುನೀಲ್, ‘‘ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೊತೆ ಚರ್ಚಿಸಿದ್ದೇವೆ. ಚಾರ್ಜ್ಶೀಟ್ನ ಕೆಲವು ಸಂಶಯಗಳಿದ್ದವು. ಜಾಮೀನು ಅರ್ಜಿ ಸಲ್ಲಿಸುವ ಸಂಬಂಧ ಹಿರಿಯ ವಕೀಲರ ಕತೆ ಚರ್ಚೆ ನಡೆಸುತ್ತೇವೆ.