ಮುಲ್ತಾನಿ ಮಿಟ್ಟಿ ಬಗ್ಗೆ ಸಾಕಷ್ಟು ಜನ ಹೆಣ್ಣು ಮಕ್ಕಳಿಗೆ ತಿಳಿದಿರುತ್ತದೆ, ಯಾಕಂದ್ರೆ ಮುಲ್ತಾನಿ ಮಿಟ್ಟಿ ಈಜಿಯಾಗಿ ಬಳಸಬಹುದಾದಂತಹ ಒಂದು ಫೇಸ್ ಪ್ಯಾಕ್ ಆಗಿದೆ .ಮುಖದ ಅಂದವನ್ನು ಹೆಚ್ಚಿಸುವಲ್ಲಿ ಮುಲ್ತಾನ್ ಮಿಟ್ಟಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿ ಸಾಕಷ್ಟು ಅಂಶಗಳಿದ್ದು ಮೆಗ್ನೀಷಿಯಂ ,ಸಿಲಿಕಾ, ಕ್ಯಾಲ್ಸಿಯಂ ಹಾಗೂ ಐರನ್ ಕಂಟೆಂಟ್ ಹೆಚ್ಚಿರುತ್ತದೆ. ತ್ವಚೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಬೆಸ್ಟ್. ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಬಳಸುವುದರಿಂದ ಏನೆಲ್ಲಾ ಬೆನಿಫಿಟ್ಸ್ ಇದೆ ಅನ್ನೋದರ ಮಾಹಿತಿ ಹೀಗಿದೆ.
ಪಿಗ್ಮೆಂಟೇಷನ್
ಒಂದು ಟೇಬಲ್ ಸ್ಪೂನ್ ಅಷ್ಟು ಮುಲ್ತಾನ್ ಮಟ್ಟಿಗೆ ಅದಕ್ಕೆ ಬೇಕಾದಷ್ಟು ನೀರನ್ನ ಹಾಕಿ ಚೆನ್ನಾಗಿ ಪೇಸ್ಟ್ ಅನ್ನು ತಯಾರಿಸಿಕೊಂಡು, ಪಿಗ್ಮೆಂಟೇಷನ್ ಆದ ಜಾಗದಲ್ಲಿ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಪಿಗ್ಮೆಂಟೇಶನ್ ಬೇಗನೆ ನಿವಾರಣೆ ಆಗುತ್ತದೆ.
ಪಿಂಪಲ್
ಪಿಂಪಲ್ ಅನ್ನುವಂಥದ್ದು ಪ್ರತಿಯೊಬ್ಬರಿಗೂ ಕೂಡ ಕಾಡುವಂತ ಸಮಸ್ಯೆ ಆಗಿದೇ. ಆದರೆ ಕೆಲವರಿಗೆ ಅತಿಯಾಗಿ ಪಿಂಪಲ್ಸ್ ಆಗುತ್ತದೇ ,ಜೊತೆಗೆ ಪಿಂಪಲ್ ಮಾರ್ಕ್ಸ್ ಕೂಡ ಹಾಗೆ ಉಳಿಯುತ್ತೆದೇ. ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ಮುಖದಲ್ಲಿರುವಂತ ಪಿಂಪಲ್ಸ್ ಕಲೆಗಳು ನಿವಾರಣೆ ಆಗುವುದರ ಜೊತೆಗೆ ಪಿಂಪಲ್ಸ್ ವಿರುದ್ಧ ಹೋರಾಡುತ್ತದೆ, ಪಿಂಪಲ್ಸ್ ಅನ್ನು ತಡೆಗಟ್ಟುತ್ತದೆ.
ಹೊಳಪು
ತ್ವಜೆಯ ಹೊಳಪು ಹೆಚ್ಚಾಗಬೇಕು, ಅಂದ ಜಾಸ್ತಿ ಆಗ್ಬೇಕು ಅನ್ನೋದು ಅಂತ ಸಾಕಷ್ಟು ಜನ ಹೆಣ್ಣು ಮಕ್ಕಳು ಪ್ರಯತ್ನ ಮಾಡುತ್ತಾನೆ ಇರುತ್ತಾರೆ .ಅಂತವರು ಈ ಮುಲ್ತಾನೀ ಮಿಟ್ಟಿ ಫೇಸ್ ಪ್ಯಾಕ್ ಬಳಸಬಹುದು. ಇದರಿಂದಾಗಿ ಯಾವುದೇ ಕೆಮಿಕಲ್ಸ್ ಇಲ್ಲದೆ ಮುಖದ ಹೊಳಪು ನ್ಯಾಚುರಲ್ ಆಗಿ ಹೆಚ್ಚಾಗುತ್ತದೆ.
ಓಪನ್ ಪೋರ್ಸ್
ಸಾಕಷ್ಟು ಜನ ಓಪನ್ ಪೋರ್ಸ್ ನಿವಾರಣೆ ಮಾಡಿಕೊಳ್ಳುತ್ತಾರೆ ಸಾಕಷ್ಟು ಟ್ರೀಟ್ಮೆಂಟ್ ಗಳನ್ನ ತೆಗೆದುಕೊಳ್ಳುತ್ತಾರೆ. ಹಾಗೂ ದುಬಾರಿ ಖರ್ಚನ್ನು ಮಾಡುತ್ತಾರೆ. ಆದರೂ ಕೂಡ ಪೋರ್ಸ್ ಕಡಿಮೆಯಾಗುವುದಿಲ್ಲ.ಇಂತವರು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಬಳಸುವುದು ಉತ್ತಮ.. ಮುಲ್ತಾನಿ ಮಿಟ್ಟಿ ತ್ವಚೆಯನ್ನು ಟೈಟ್ ಮಾಡುತ್ತದೆ ಹಾಗೂ ದಿನದಿಂದ ದಿನಕ್ಕೆ ಪೋರ್ಸ್ ಕಡಿಮೆಯಾಗುತ್ತದೆ.
- ಆಯ್ಲಿ ಸ್ಕಿನ್ ಇದ್ದವರು ಮುಲ್ತಾನಿ ಮಿಟ್ಟಿ ಜೊತೆ ರೋಜ್ ವಾಟರ್ ಅನ್ನ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.
- ಡ್ರೈ ಸ್ಕಿನ್ ಇದ್ದವರು ಹಾಲು, ಮೊಸರು ಅಥವಾ ಜೇನುತುಪ್ಪದ ಜೊತೆಗೆ ಮುಲ್ತಾನಿ ಮಿಟ್ಟಿಯನ್ನ ಬೆರೆಸಿ ಹಚ್ಚುವುದರಿಂದ ತ್ವಚೆಗೆ ಒಳ್ಳೆಯದು.
- ನಾರ್ಮಲ್ ಸ್ಕಿನ್ ಇದ್ದವರು ಮುಲ್ತಾನಿ ಮಿಟ್ಟಿ ಜೊತೆಗೆ ಗಂಧದ ಪುಡಿ ಹಾಗೂ ಅರಿಶಿನ ಜೊತೆಗೆ ಸ್ವಲ್ಪ ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣವನ್ನು ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಉತ್ತಮ.