ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಒಂದೆಡೆಯಾದರೆ. ಇನ್ನು ಕೆಲವರು ಜಾಸ್ತಿ ತಲೆ ಕೆಡಿಸ್ಕೊಳ್ಳುವುದಿಲ್ಲ. ಆದ್ರೆ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಕೆಲಸ ಇಲ್ಲವಾದಲ್ಲಿ ನಮ್ಮ ಕೈಯಾರೆ ನಮ್ಮ ಸ್ಕಿನ್ ಹಾಗೂ ಅಂದವನ್ನು ಹಾಳು ಮಾಡಿಕೊಳ್ಳುತ್ತೇವೆ. ಅತಿಯಾಗಿ ಅಲ್ಲದಿದ್ರೂ ಕೂಡ ಬೇಸಿಕ್ ಥಿಂಗ್ಸ್ ಅನ್ನ ನಮ್ಮ ಸ್ಕಿನ್ ಗೆ ಅಪ್ಲೈ ಮಾಡುವುದು ಉತ್ತಮ. ಅದ್ರಲ್ಲಿ ಮುಖ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ನಿಮ್ಮ ತ್ವಜ್ಗೆ ಮಾಯ್ಶ್ಚರೈಸರ್ ಅನ್ನ ಹಚ್ಚುವುದು ತುಂಬಾನೇ ಒಳ್ಳೆಯದು. ಮೇಕಪ್ ಮಾಡುವ ಮುಂಚೆ ಹಾಗೂ ಮೇಕ್ ಅಪ್ ತೆಗೆದ ನಂತರ ಹಚ್ಚಲೇಬೇಕು. ತಪ್ಪದೇ ಮಾಯಿಶ್ಚರೈಸರ್ ಅನ್ನ ಬಳಸುವುದರಿಂದ ಏನೆಲ್ಲಾ ಬೆನಿಫಿಟ್ಸ್ ಇದೆ ಅನ್ನೋದನ್ನ ಮಾಹಿತಿ ಇಲ್ಲಿದೆ ನೋಡಿ.
ಮೃದುವಾದ ಚರ್ಮ:
ಪ್ರತಿದಿನ ನಾವು ಮಾಯಿಶ್ಚರೈಸರ್ ಅನ್ನ ಬಳಸುವುದರಿಂದ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಡ್ರೈ ನೆಸ್ ಮತ್ತು ತುರಿಕೆ:
ನಮ್ಮ ತ್ವಜೆಯಲ್ಲಿ ಉಂಟಾಗುವ ಕಿರಿಕಿರಿ ಅಥವಾ ತುರಿಕೆ ಶಮನಗೊಳ್ಳುತ್ತದೆ ಹಾಗೂ ತೇವಾಂಶ ಹೆಚ್ಚಾಗುತ್ತದೆ.
ಸ್ಕಿನ್ ಟೋನ್:
ಚರ್ಮವನ್ನು ಹೈಡ್ರೇಟ್ ಮಾಡಿ ತ್ವಜೆಯ ರೇಡಿಯಂಟ್ ಹೆಚ್ಚು ಮಾಡುತ್ತದೆ, ಮುಖದ ಹೊಳಪು ಜಾಸ್ತಿಯಾಗುತ್ತದೆ ,ಕಾಂತಿಯು ಸ್ಕಿನ್ ನಿಮ್ಮದಾಗುತ್ತದೆ.
ಸುಕ್ಕು ಗೆರೆಗಳು:
ಪ್ರತಿದಿನ ಮಾಯಿಶ್ಚರೈಸರ್ ಅನ್ನ ಹಚ್ಚುವುದರಿಂದ ತ್ವಚೆಯಲ್ಲಾಗುವಂತಹ ರಿಂಕಲ್ಸ್ ಕಡಿಮೆಯಾಗುತ್ತದೆ.
ಸ್ಕಿನ್ ಕಂಡೀಶನ್ :
ಎಸ್ಜಿಮಾ, ಸೋರಿಯಾಸಿಸ್ ಮತ್ತು ಇತರ ಒಣ ಚರ್ಮದ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಚರ್ಮದ ಸೋಂಕನ್ನು ತಡೆಯುತ್ತದೆ:
ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ, ಇನ್ಫೆಕ್ಷನ್ , ಇರಿಟೇಷನ್, ಇಚ್ಚಿಂಗ್ ಹೇಗೆ ಸಾಕಷ್ಟು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೇಕ್ಅಪ್ ಅಪ್ಲಿಕೇಶನ್ ಅನ್ನು ಸುಧಾರಿಸುತ್ತದೆ:
ಹೈಡ್ರೀಕರಿಸಿದ ಚರ್ಮವು ಮೃದುವಾದ ಮೇಕ್ಅಪ್ ಅಪ್ಲಿಕೇಶನ್ ಅನ್ನು ಅನುಮತಿಸುತ್ತದೆ.
ಒಟ್ಟಾರೆ ಚರ್ಮದ ಆರೋಗ್ಯವನ್ನು ಹೆಚ್ಚಾಗುತ್ತದೆ, ಚರ್ಮವನ್ನು ಕಾಪಾಡಿಕೊಳ್ಳಲು ಮಾಯಿಶ್ಚರೈಸಿಂಗ್ ಅತ್ಯಗತ್ಯ.