• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೋರ್ಟ್​ ಆದೇಶದ ನಂತರವೂ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡದ ಪಿಸಿಬಿ: ಯತ್ನಾಳ್​ ಧರಣಿ

ಪ್ರತಿಧ್ವನಿ by ಪ್ರತಿಧ್ವನಿ
August 28, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರ: ನ್ಯಾಯಾಲಯದ ಆದೇಶದ ನಂತರವೂ ಬಿಜೆಪಿ ( BJP ) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ ( Basangouda Patil Yatnal)​ ಒಡೆತನದ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ( PCB ) ಮುಂದಾಗಿಲ್ಲ.

ADVERTISEMENT

ಇದರಿಂದ ಬೆಂಗಳೂರಿನ (Bengaluru) ಎಂ.ಜಿ.ರಸ್ತೆಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ ಧರಣಿ ನಡೆಸಿದರು. ಧರಣಿ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್​.ಅಶೋಕ್ ಕೂಡ ಭೇಟಿ ನೀಡಿದರು.

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಒಡೆತನದ ಸಕ್ಕರೆ ಕಾರ್ಖಾನೆ ಇದೆ. ಈ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ಎಥೆನಾಲ್​ ಉತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಲೈಸೆನ್ಸ್ ನವೀಕರಣ ಆಗಿಲ್ಲ ಎಂದು ಮಂಡಳಿ ಕಾರ್ಖಾನೆಯನ್ನು ಮುಚ್ಚಿಸಿತ್ತು.

ಮಂಡಳಿ ವಿರುದ್ಧ ಬಸನಗೌಡ ಪಾಟೀಲ್​ ಯತ್ನಾಳ್​ ಹೈಕೋರ್ಟ್ ಮೊರೆ ಹೋಗಿದ್ದರು. ಕೆಲ ದಿನಗಳ ಹಿಂದೆ ನ್ಯಾಯಾಲಯ ಕಾರ್ಖಾನೆ ಪುನಾರಂಭಿಸಲು ಆದೇಶ ನೀಡಿತ್ತು. ಆದೇಶವನ್ನು ಪಾಲಿಸದೇ ಮಂಡಳಿ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದೆ. ಆದರೆ, ನ್ಯಾಯಾಲಯದ ಆದೇಶದಂತೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡಿ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ತಡರಾತ್ರಿ ಮಂಡಳಿ ಕಚೇರಿಯಲ್ಲಿ ಧರಣಿ ನಡೆಸಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್​ ಯತ್ನಾಳ್​, ಕರ್ನಾಟಕದಲ್ಲಿ ಚಿಂಚೋಳಿ ಹಿಂದುಳಿದ ತಾಲೂಕು. ಚಿಂಚೋಳಿ ಹೆಚ್ಚು ದಲಿತರು ಇರುವ ಮತ ಕ್ಷೇತ್ರ. ಇಲ್ಲಿ 15 ವರ್ಷದ ಹಿಂದೆ ಪಿ.ಚಿಂದಂಬರಂ ಅವರು ಸಕ್ಕರೆ ಕಾರ್ಖಾನೆ ತೆರಯಲು ಮುಂದಾಗಿದ್ದರು. ಅದೊಂದು ದೊಡ್ಡ ಹಗರಣ, ಸಿಬಿಐ ತನಿಖೆಗೆ ಹೋಯಿತು. ಹರಾಜಿಗೆ 11 ಸಲ ಟೆಂಡರ್ ಕರೆದರೂ ಯಾರು ಮುಂದಾಗಿರಲಿಲ್ಲ. ನಮ್ಮ ರೈತರು ವಿನಂತಿಸಿದ್ದಕ್ಕೆ 38 ಕೋಟಿ ಟೆಂಡರ್ ಮಾಡಿ, ಎಥೆನಾಲ್ ತಯಾರು ಮಾಡುತ್ತಿದ್ದೇನೆ ಎಂದು ತಿಳಿಸಿದರು.

Tags: Basangouda Patil YatnalBJPCourt Order
Previous Post

ಪ್ರಾಸಿಕ್ಯೂಷನ್ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿರುವ ಸಿಎಂ !ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ ಸಿಎಂ ಸಿದ್ದು ಅರ್ಜಿ !

Next Post

ಮಂಡ್ಯ ಸಗರಸಭೆಯಲ್ಲಿ ರೋಚಕ ಗೆಲುವು ಸಾಧಿಸಿದ ಜೆಡಿಎಸ್ ! ಚೆಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟ ಹೆಚ್.ಡಿ.ಕೆ ! 

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post
ಮಂಡ್ಯ ಸಗರಸಭೆಯಲ್ಲಿ ರೋಚಕ ಗೆಲುವು ಸಾಧಿಸಿದ ಜೆಡಿಎಸ್ ! ಚೆಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟ ಹೆಚ್.ಡಿ.ಕೆ ! 

ಮಂಡ್ಯ ಸಗರಸಭೆಯಲ್ಲಿ ರೋಚಕ ಗೆಲುವು ಸಾಧಿಸಿದ ಜೆಡಿಎಸ್ ! ಚೆಲುವರಾಯಸ್ವಾಮಿಗೆ ಠಕ್ಕರ್ ಕೊಟ್ಟ ಹೆಚ್.ಡಿ.ಕೆ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!