ಮಧುಬನಿ (ಬಿಹಾರ): ಬಿಹಾರದ ಮಧುಬನಿ ಜಿಲ್ಲೆಯಲ್ಲಿರುವ “ಅಪ್‌ಗ್ರೇಡ್” ಶಾಲೆಯೊಂದರ ವಿದ್ಯಾರ್ಥಿಗಳು ತರಗತಿ ಕೊಠಡಿಗಳು ಮತ್ತು ಊಟದ ಕೋಣೆ ಇಲ್ಲದ ಕಾರಣ ಸ್ಮಶಾನ ಅಥವಾ ಮಸೀದಿಯ ಮುಖ್ಯ ಗೇಟ್‌ನಲ್ಲಿ ತರಗತಿಗಳನ್ನು ನಡೆಸಿ ಮಧ್ಯಾಹ್ನದ ಊಟವನ್ನು ಸೇವಿಸುವಂತೆ ಒತ್ತಾಯಿಸಲಾದ ಕುರಿತು ವರದಿ ಆಗಿದೆ.
ಮಧುಬನಿ ಜಿಲ್ಲೆಯ ಅಂಧರತಧಿ ಬ್ಲಾಕ್‌ನಲ್ಲಿರುವ ಹರ್ನಾ ಪಂಚಾಯತ್‌ನ ಉನ್ನತೀಕರಿಸಿದ ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಬಗ್ಗೆ ಬಿಹಾರ ಸರ್ಕಾರದ ಅನೇಕ ಕ್ರಮ ಕೈಗೊಂಡಿದೆ.
ಮಾಧ್ಯಮ ತಂಡ ಗುರುವಾರ ಶಾಲೆಗೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಸ್ಮಶಾನದಲ್ಲಿ ಸಮಾಧಿ ಬಳಿ ಕುಳಿತು ಅಧ್ಯಯನ ಮಾಡುತಿದ್ದರು ಅವರು ಸ್ಮಶಾನದಲ್ಲಿ ಸಮಾಧಿಯ ಬಳಿ ಕುಳಿತು ಊಟ ಮಾಡಿದರು. ಕೆಲವು ಮಕ್ಕಳು ರಸ್ತೆಯಲ್ಲಿ ಊಟ ಮಾಡಿದರೆ ಕೆಲವರು ಮಸೀದಿಯ ಮುಖ್ಯ ದ್ವಾರ ಮತ್ತು ಸ್ಥಳೀಯ ಈದ್ಗಾದಲ್ಲಿ ಕುಳಿತು ಊಟ ಮಾಡುತ್ತಾರೆ.ಇದಕ್ಕೆ ತರಗತಿ ಕೊಠಡಿಗಳ ಕೊರತೆಯೇ ಕಾರಣ ಆಗಿದೆ. ಮಧುಬನಿ ಶಾಲೆಯಲ್ಲಿ 2006ರಲ್ಲಿ ಪ್ರಾಥಮಿಕ ಶಾಲೆಯಿಂದ ಮಧ್ಯಮ ಶಾಲೆಯಾಗಿ ಮೇಲ್ದರ್ಜೆಗೇರಿದರೂ ಮೂಲಸೌಕರ್ಯಗಳ ಕೊರತೆ ಮುಂದುವರಿದಿದೆ.
2014-15ನೇ ಹಣಕಾಸು ವರ್ಷದಲ್ಲಿ ಕಟ್ಟಡ ನಿರ್ಮಾಣಕ್ಕೆ 7 ಲಕ್ಷ ರೂ. ಬಂದಿದ್ದು, ನಿವೇಶನ ಕೊರತೆಯಿಂದ ಹಣ ಲ್ಯಾಪ್ಸ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಪಾಸ್ವಾನ್ ಮಾತನಾಡಿ, ಈ ಎರಡು ಕೊಠಡಿಗಳಲ್ಲಿ ಒಂದು ಕೊಠಡಿಯನ್ನು ತಾತ್ಕಾಲಿಕ ಅಡುಗೆ ಕೋಣೆಯಾಗಿ ಮತ್ತು ದಾಸ್ತಾನು ಕೊಠಡಿ ಆಗಿ ಬಳಸಲಾಗುತ್ತದೆ, ಉಳಿದ ಜಾಗವನ್ನು ತರಗತಿಗಳು ಮತ್ತು ಸಿಬ್ಬಂದಿಗೆ ಬಳಸಲಾಗುತ್ತದೆ. ಶಾಲೆಯು ಉಚ್ಛ್ರಾಯ ಸ್ಥಿತಿಯಲ್ಲಿ, 400 ಮಕ್ಕಳ ದಾಖಲಾತಿ ಹೊಂದಿತ್ತು, ಇದು ಸ್ಥಳಾವಕಾಶದ ಕೊರತೆಯಿಂದ ಮಕ್ಕಲ ಸಂಖ್ಯೆ ಇಳಿಮುಖ ಆಯಿತು.
ಪ್ರಸ್ತುತ ಶಾಲೆಯಲ್ಲಿ ದಾಖಲಾದ 295 ಅಲ್ಲದೆ, ಶಾಲೆಯಲ್ಲಿ ನಿಯೋಜಿಸಲಾದ ಒಂಬತ್ತು ಶಿಕ್ಷಕರೂ ಮೂಲಸೌಕರ್ಯಗಳ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗಿದೆ. ಶಿಕ್ಷಕರೂ ರಸ್ತೆಗಳಲ್ಲಿ ಬಯಲಿನಲ್ಲಿ ಬೇವಿನ ಮರದ ಕೆಳಗೆ ಸ್ಮಶಾನದಲ್ಲಿ ಕುರ್ಚಿಗಳ ಮೇಲೆ ಕುಳಿತು ಮಕ್ಕಳಿಗೆ ಪಾಠ ಮಾಡುತ್ತಾರೆ.
ಇನ್ನು ಕೆಲವೇ ದಿನಗಳಲ್ಲಿ ಸ್ಮಶಾನಕ್ಕೆ ಬೇಲಿ ಹಾಕಲಾಗುತ್ತಿದ್ದು, ಇದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎನ್ನುತ್ತಾರೆ ಶಿಕ್ಷಕ ಸಫೀಕರ್ ರೆಹಮಾನ್. ಮತ್ತೋರ್ವ ಶಿಕ್ಷಕ ಮಹಮ್ಮದ್ ಇಸ್ರೇಲ್ ಮಾತನಾಡಿ, ಸರಕಾರಿ ಜಾಗದ ಕೊರತೆಯಿಂದ ಮಸೀದಿಯ ಜಾಗದಲ್ಲಿ ಶಾಲೆ ನಿರ್ಮಿಸಲಾಗಿದೆ ಎಂದರು.