ಮಂತ್ರಾಲಯದಲ್ಲಿ (Mantralaya) ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಜೋರಾಗಿದೆ. ಈ ಹಿನ್ನಲೆ, ಇಂದು ಶ್ರೀರಾಘವೇಂದ್ರ ಸ್ವಾಮೀಜಿಗಳ (Sri Raghavendra swamy) ಪೂರ್ವಾರಾಧನೆ ನಡೆಯುತ್ತಿದೆ. ಹೀಗಾಗಿ ಇಂದು ಬೆಳಗ್ಗೆಯಿಂದಲ್ಲೇ ಮಂತ್ರಾಲಯದ ಶ್ರೀಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದೆ.

ಸದ್ಯ ಇದೀಗ ಸುಪ್ರಭಾತ, ಉತ್ಸವ ರಾಯರ ಪಾದಪೂಜೆ, ಮಹಾಪಂಚಾಮೃತ ಅಭಿಷೇಕ, ಹಿಂದಿನ ಯತಿಗಳ ವೃಂದಾವನಗಳಿಗೆ ಪೂಜೆ ನಡೆಯುತ್ತಿದೆ. ಹಾಗೇ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಮೂಲರಾಮದೇವರಿಗೆ ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾ ಮಂಗಳಾತಿ ಮಾಡಲಿದ್ದಾರೆ.
ಹೀಗಾಗಿ ದೇಶ- ವಿದೇಶದಿಂದ ಭಕ್ತರ ದಂಡು ಮಳೆಯ ನಡುವೆಯೇ ತುಂಗಭದ್ರಾ (Tunga-bhadra) ನದಿಯಲ್ಲಿ ಮಿಂದು ರಾಯರ ದರ್ಶನಕ್ಕೆ ಬರ್ತಿದ್ದಾರೆ. ಜೊತಗೆ ಬೆಳಗ್ಗೆಯಿಂದಲ್ಲೇ ಉರುಳು ಸೇವೆ, ಹೆಜ್ಜೆ ಸೇವೆ ಸೇರಿದಂತೆ ನಾನಾ ಸೇವೆಯಲ್ಲಿ ತೊಡಗಿದ್ದಾರೆ.