ಈ ಹಿಂದೆ 2008 ರಲ್ಲಿ ಮುಂಬೈನಲ್ಲಿ (Mumbai) ನಡೆದ ಭೀಕರ ಭಯೋತ್ಪಾದನಾ ದಾಳಿಗೆ ನೆರವು ನೀಡಿದ್ದ ಹುಸೇನ್ ರಾಣಾನನ್ನ ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾ ನ್ಯಾಯಾಲಯ (american court) ಗ್ರೀನ್ ಸಿಗ್ನಲ್ ಕೊಟ್ಟಿದೆ.ಭಯೋತ್ಪಾದಕ ಕೃತ್ಯಗಳನ್ನು ಪ್ಲಾನ್ ಮಾಡುವ ಮಾಸ್ಟರ್ ಮೈಂಡ್ ಆಗಿದ್ದಕ್ಕಾಗಿ ರಾಣಾನನ್ನ 2009ರಲ್ಲಿ ಅಮೆರಿಕ FBI ಬಂಧಿಸಿತ್ತು.
ಇದೀಗ ರಾಣಾ ಭಾರತದಲ್ಲಿ (India) ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಭಾರತ ಬಹಳಷ್ಟು ಸಾಕ್ಷಿಗಳನ್ನು ಒದಗಿಸಿದೆ ಎಂದು ಅಮೆರಿಕದ ನೈಂತ್ ಸರ್ಕೀಟ್ ಮೇಲ್ಮನವಿ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಇನ್ನು ತಹಾರ್ ರಾಣಾ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ನ್ಯಾಯಾಲಯ ತಿರಸ್ಕರಿಸಿದ್ದು, ಲಾಸ್ ಏಂಜಲ್ಸ್ ನ ಜೈಲಿನಲ್ಲಿರೋ ರಾಣಾಗೆ ಇದ್ರಿಂದ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ರಾಣಾನನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕ ಕೋರ್ಟ್ ತೀರ್ಪು ನೀಡಿದ್ದು, ಭಯೋತ್ಪಾದನೆಗೆ ನೆರವು ಕೊಟ್ಟ ಆರೋಪಿ ರಾಣಾ ಭಾರತಕ್ಕೆ ಬರೋ ಮುನ್ಸೂಚನೆ ಸಿಕ್ಕಿದೆ.