ವಿಧಾನಸೌಧದ ಸಮೀಪ ಸ್ಕೂಟರ್ಗೆ (Scooter) ಮಾಲೀಕನೇ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ ಬೈಕ್ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಸದ್ಯ ಯುವಕನನ್ನು ವಿಧಾನಸೌಧ (Vidhanasouda) ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಚಳ್ಳಕೆರೆ ಮೂಲದ ಪೃತ್ವಿರಾಜ್ ಎಂಬ ಯುವಕ ಟ್ರಕ್ಕಿಂಗ್ ಹೋಗಿ ಮಿಸ್ಸಾಗಿದ್ದ. ಈ ಹಿನ್ನಲೆ ಗಾಬರಿಗೊಂಡ ಆತನ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ(Challakere Police Station) ದೂರು ನೀಡಲು ಹೋದಾಗ ಪೊಲೀಸರು ಪೃಥ್ವಿ ತಾಯಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ನನ್ನ ತಾಯಿಯನ್ನು ಬೈದಿದ್ದಕ್ಕೆ ಬೇಸರಗೊಂಡ ಪೃತ್ವಿರಾಜ್(Prithvi Raj), ವಿಧಾನಸೌಧದ ಮುಂದೆಯೇ ಬೈಕ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾನೆ.