
ಹೊಸಪೇಟೆ: ತುಂಗಭದ್ರಾ ಡ್ಯಾಂ ಗೇಟ್‌ಗಳ ನಿರ್ವಹಣೆಯಲ್ಲಿ ಅ ಧಿಕಾರಿಗಳ ನಿರ್ಲಕ್ಷ್ಯ ಇದ್ದು, ಗೇಟ್ ಮುರಿದ ಘಟನೆ ಕುರಿತು ತಜ್ಞರ ಮೂಲಕ ಸರ್ಕಾರ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ಯಾಂ ಗೇಟ್ ಮುರಿದು ಅನ್ನದ ಬಟ್ಟಲಿಗೆ ಕನ್ನ ಬಿದ್ದಿದೆ.ಘಟನೆಗೆ ಕಾರಣರಾದವರ ವಿರುದ್ಧ ಸರಕಾರ ಕ್ರಮ ಜರಗಿಸಬೇಕು.
1955ರಲ್ಲಿ ಈ ಗೇಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಬೇಸಗೆಯಲ್ಲಿ ಗೇಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಗೇಟ್‌ಗಳು ಸರಿ ಇವೆ ಎಂದು ಅಧಿಕಾರಿಗಳು ಸರ್ಟಿಫೈ ಮಾಡಿದ್ದಾರೆ. 50 ವರ್ಷ ಗೇಟ್‌ಗಳು ಬಾಳಿಕೆ ಬರುತ್ತವೆ ಎಂದರು.ತಜ್ಞರ ಮೂಲಕ ತನಿಖೆ ಆಗಬೇಕುಅ ಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದು, ತಜ್ಞರ ಮೂಲಕ ತನಿಖೆ ಆಗಬೇಕು. ಉಳಿದ ಗೇಟ್‌ಗಳ ವಸ್ತುಸ್ಥಿತಿಯ ಪರಿಶೀಲನೆಯೂ ನಡೆಯಬೇಕು.
ಗೇಟ್ ಅಳವಡಿಸಲು 10 ದಿನ ಬೇಕಾಗುತ್ತದೆ. 68 ಟಿಎಂಸಿ ನೀರು ನದಿ ಪಾಲಾಗುತ್ತಿದ್ದು, ಈ ನೀರು ಜಲಾಶಯದಲ್ಲಿದ್ದರೆ ಸುಮಾರು 15 ಲಕ್ಷ ಹೆಕ್ಟೇರ್ ಬೆಳೆಗೆ ನೀರು ಸಿಗುತ್ತಿತ್ತು. ಒಂದು ಬೆಳೆಗೆ ನೀರು ಕೊಡಲು ಸಹ ಸರಕಾರ ಯೋಚನೆ ಮಾಡುತ್ತಿದೆ ಎಂದರು.
