ಅಪ್ರಾಪ್ತ ಮಕ್ಕಳಿಗೆ ಬೈಕ್ (Bike) ಕೊಡೋ ಮುನ್ನ ಹುಷಾರಾಗಿರಿ. ಒಂದುವೇಳೆ ಹಾಗೆ ಗಾಡಿ ಕೊಟ್ಟರೆ ಪೋಷಕರ ಮೇಲೂ ಕೇಸ್ ದಾಖಲಾಗಲಿದೆ.ಮಕ್ಕಳು ಬೈಕ್ ಕಲಿತುಕೊಳ್ಳಲಿ ಅಂತ ಕೊಟ್ರೆ ವೀಲ್ಹಿಂಗ್ (Wheeling) ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅಷ್ಟೇ ಅಲ್ಲ ಆ ವ್ಹೀಲಿಂಗ್ ಸ್ಟಂಟ್ ನ್ನ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ (Social media) ಅಪ್‌ಲೋಡ್ ಕೂಡ ಮಾಡುವ ಕ್ರೇಜ್ ಹೆಚ್ಚಾಗಿದೆ.

ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ವರ್ಷ ಇಂಥ ಪ್ರಕರಣಗಳ ಸಂಖ್ಯೆ ಅತಿ ಹೆಚ್ಚು ದಾಖಲಾಗಿವೆ. 2024ರ ಎಂಟು ತಿಂಗಳಲ್ಲಿ ಒಟ್ಟು 325 ವೀಲ್ಹಿಂಗ್ ಕೇಸ್ ಗಳು ದಾಖಲಾಗಿದೆ. ಅವುಗಳಲ್ಲಿ 283 ವಯಸ್ಕರ ವಿರುದ್ಧ ದಾಖಲಾದ್ರೆ 75 ಅಪ್ರಾಪ್ತರ ವಿರುದ್ಧ ಕೇಸ್ ದಾಖಲಾಗಿದೆ.

75 ಪ್ರಕರಣಗಳಲ್ಲಿ 74 ಪ್ರಕರಣಗಳಲ್ಲಿ ಪೋಷಕರನ್ನ ಪತ್ತೆ ಮಾಡಿ ಕೇಸ್ ದಾಖಲು ಮಾಡಲಾಗಿದೆ. ಜೊತೆಗೆ ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಿದ ಆರೋಪದ ಮೇಲೆ 5 ಲಕ್ಷ ದಿಂದ 15 ಸಾವಿರದವರೆಗೆ ದಂಡ ವಸೂಲಿ ಮಾಡಲಾಗಿದೆ.ಹೀಗೆ ಇನ್ಮುಂದೆ ಅಪ್ರಾಪ್ತರು ವೀಲಿಂಗ್ ಮಾಡಿದ್ರೆ, ಅವರ ಪೋಷಕರನ್ನು ಕೇಸ್ ಗೆ ಒಳಪಡಿಸುವ ಮೂಲಕ, ತಂದೆ ತಾಯಿ ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡದಂತೆ ತಡೆಯಲು ಪೊಲೀಸರು ಮುಂದಾಗಿದ್ದಾರೆ.