ಮಳೆಗಾಲದಲ್ಲಿ ಹೆಚ್ಚಿನವರ ಮನೆಯಲ್ಲಿ ಚಿಕ್ಕ ಚಿಕ್ಕ ನೊಣಗಳನ್ನು ನೀವು ನೋಡ್ತೀರಾ, ಅವುಗಳಿಂದ ಸಾಕಷ್ಟು ಕಿರಿಕಿರಿಯಾಗುತ್ತದೆ, ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಅದರಲ್ಲೂ ಕೂಡ ಸಿಂಕ್ ಬಳಿ ಈ ನೊಣಗಳು ಕಾಟ ಜಾಸ್ತಿ, ಪತ್ರಗಳನ್ನು ತೊಳೆಯದೆ ಹಾಗೆ ಇಟ್ಟಾಗ , ಪದಾರ್ಥಗಳನ್ನು ಮುಚ್ಚಿದೆ ಇದ್ದಾಗ ,ತರಕಾರಿಗಳಲ್ಲಿ ಇಟ್ಟ ಜಾಗದಲ್ಲಿ ಹಣ್ಣುಗಳಿಂದ ಜಾಗದಲ್ಲಿ ಈ ನೊಣಗಳು ಹೆಚ್ಚಿರುತ್ತವೆ ಹಾಗೂ ಡಸ್ಟ್ ಬಿನ್ ಇದ್ದ ಜಾಗದಲ್ಲೂ ಕೂಡ ಈ ನೊಣಗಳನ್ನು ನೀವು ನೋಡಬಹುದು.

ಇವುಗಳನ್ನು ಹಣ್ಣಿನ ನೊಣಗಳು ಅಂತ ಕರೀತಾರೆ,ಕಾರಣ ಇವುಗಳು ಕೊಳೆತು ಹೋಗುತ್ತಿರುವ ಹಣ್ಣುಗಳು ಹಾಗು ತರಕಾರಿಗಳ ಮೇಲೆ ಮೊಟ್ಟೆಯನ್ನು ಇಟ್ಟು ನಂತರ ಅವುಗಳ ಬೆಳವಣಿಗೆ ಹೆಚ್ಚಾಗುತ್ತದೆ. ಈ ಹಣ್ಣಿನ ನೊಣಗಳನ್ನು ಕಡಿಮೆ ಮಾಡಲು ಯಾವ ರೀತಿಯ ಹ್ಯಾಕ್ ಗಳನ್ನು ಮಾಡಬಹುದು ಅನ್ನೋದರ ಮಾಹಿತಿ ಹೀಗಿದೆ.
- ಈ ನೊಣಗಳು ಹೆಚ್ಚಾದಾಗ ಮನೆಯಲ್ಲಿರುವ ಅಗರಬತ್ತಿಯನ್ನ ಹಚ್ಚಿಡುವುದರಿಂದ ಅದರ ಹೊಗೆಗೆ ಈ ನೊಣಗಳು ಕಡಿಮೆಯಾಗುತ್ತದೆ.
- ತಟ್ಟೆ ಅಥವಾ ಬೌಲಿಗೆ ತೆಂಗಿನಕಾಯಿ ಮೇಲಿರುವ ನಾರುಗಳನ್ನ ಹಾಕಿ, ಅದರ ಮೇಲೆ ಕರ್ಪೂರವನ್ನ ಪುಡಿ ಮಾಡಿ ಹಾಕಿ, ಬೆಂಕಿ ಹಚ್ಚಿ ನಂತರ ಅದನ್ನು ನೊಣಗಳಿರುವ ಜಾಗದಲ್ಲಿ ಇಡುವುದರಿಂದ ಬೇಗನೆ ಕಡಿಮೆಯಾಗುತ್ತದೆ.
- ಮಳೆಗಾಲದಲ್ಲಿ ಯಾವುದೇ ಹಣ್ಣು ತರಕಾರಿಗಳನ್ನ ತಂದರು ಕೂಡ ಫ್ರಿಜ್ಜಿನಲ್ಲಿ ಇಡುವುದು ಉತ್ತಮ ಇದರಿಂದ ಫ್ರೆಶ್ ಆಗಿರುತ್ತದೆ ಹಾಗೂ ನೊಣಗಳು ಕಡಿಮೆಯಾಗುತ್ತದೆ.
- ಅಡುಗೆ ಮನೆಯ ಸಿಂಕಿನಲ್ಲಿರುವ ಪಾತ್ರೆಗಳನ್ನು ಆಗಾಗ ತೊಳೆದು ಮುಗಿಸುವುದರಿಂದ ನೊಣಗಳ ಕಿರಿಕಿರಿ ಇಂದ ಮುಕ್ತಿ ಪಡೆಯಬಹುದು.
- ಹಾಗೂ ಪ್ರತಿದಿನವೂ ಕಷ್ಟವನ್ನ ಎಸೆದು ಡಸ್ಟ್ ಬಿನ್ ಇಡುವ ಜಾಗವನ್ನು ಸ್ವಚ್ಛವಾಗಿರಿಸುವುದರಿಂದ ಹಣ್ಣಿನ ನೊಣಗಳ ಕಾಟ ತಪ್ಪುತ್ತದೆ.
- ಹಲಸಿನ ಹಣ್ಣನ್ನು ಕಟ್ ಮಾಡಿ ತೊಳೆಯನ್ನ ಬಿಡಿಸದೆ ಮೇಣವನ್ನ ಹೊರೆಸದೆ ಹಾಗೆ ಇಡಬೇಕು.ಆಗ ನೊಣಗಳು ಬಂದು ಅದರ ಮೇಲೆ ಕುಳಿತುಕೊಳ್ಳುತ್ತವೆ ಆ ಮೇಣಗಳಿಗೆ ನೊಣಗಳು ಅಂಟಿಕೊಳ್ಳುತ್ತವೆ .ಬಳಿಕ ಆ ಹಣ್ಣನ್ನ ಎಸೆದರೆ ನೊಣಗಳು ಕಡಿಮೆಯಾಗುತ್ತದೆ.