ಮಳೆಗಾಲ ಮಳೆಯಲ್ಲಿ ನೆನೆಯಬೇಕೆಂದೇನಿಲ್ಲ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ನಮಗೆ ಶೀತ ನೆಗಡಿ ಗಂಟಲು ನೋವು ಕೆಮ್ಮು ಹೆಚ್ಚಾಗುತ್ತದೆ.ಕೆಲವರಿಗೆ ಸ್ವಲ್ಪ ಚಳಿ ಅಥವಾ ನೀರಿನಲ್ಲಿ ಸ್ವಲ್ಪ ನೆನೆದರೂ ಕೂಡ ಕೆಮ್ಮು ಹಾಗೂ ಗಂಟಲಿನ ಸಮಸ್ಯೆ ಎದುರಾಗುತ್ತದೆ ದಿನದಿಂದ ದಿನಕ್ಕೆ ಕೆಮ್ಮಿನ ಸಮಸ್ಯೆ ಹಾಗೂ ಕಫ ಜಾಸ್ತಿ ಆದ್ರೆ ಟಿಬಿ ಎಂದು ಕೂಡ ಹೇಳುತ್ತಾರೆ. ಕೆಮ್ಮು ಹಾಗೂ ಗಂಟಲು ನೋವು ಶುರುವಾದ ಮೊದಲ ಎರಡು ದಿನದಲ್ಲಿ ಇದನ್ನ ನಿವಾರಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಇತರೆ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ ಈ ಕೆಮ್ಮು ಗಂಟಲು ನೋವನ್ನ ನಿವಾರಣೆ ಮಾಡುವುದಕ್ಕೆ ಈ ಸುಲಭ ಮನೆ ಮದ್ದುಗಳನ್ನ ಬಳಸಿ.
ಹಾಲು ಮತ್ತು ಅರಿಶಿಣ
ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲನ್ನ ಚೆನ್ನಾಗಿ ಕುದಿಸಿ ನಂತರ ಚಿಟಿಕೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಕೆಮ್ಮು ಹಾಗೂ ಗಂಟಲು ನೋವು ತಕ್ಷಣಕ್ಕೆ ನಿವಾರಣೆ ಆಗುತ್ತದೆ ಕಫ ಕಟ್ಟುವುದಿಲ್ಲ ಕಾರಣ ಅರಿಶಿಣದಲ್ಲಿ ಸಾಕಷ್ಟು ಔಷಧಿ ಗುಣಗಳಿವೆ.
ಮೆಣಸು ಹಾಗೂ ಜೇನು
ಕಪ್ಪು ಮೆಣಸನ್ನ ಸ್ವಲ್ಪ ಹುರಿದು ನಂತರ ಅದನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನ ಬೆರೆಸಿ ಈ ಮಿಶ್ರಣವನ್ನು ಸೇವಿಸುವುದರಿಂದ ಗಂಟಲು ನೋವು ,ಗಂಟಲು ಕೆರೆತ ಕಡಿಮೆಯಾಗುತ್ತದೆ.
ಒಂದು ಲೋಟ ನೀರಿಗೆ ಸ್ವಲ್ಪ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಬೆಲ್ಲ ಅಥವಾ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೆಚ್ಚಗಾದ ನಂತರ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
ಶುಂಠಿ ಕಷಾಯ
ನೆಗಡಿ ಗಂಟಲು ನೋವು ಕೆಮ್ಮಿನ ಸಮಸ್ಯೆಗೆ ಶುಂಠಿ ರಾಮಬಾಣ ಅಂತ ಹೇಳಿದ್ರೆ ತಪ್ಪಾಗಲ್ಲ ಶುಂಠಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದು ಆಂಟಿ ಬ್ಯಾಕ್ಟೀರಿಯಲ್ ಅಂಶವನ್ನು ಹೊಂದಿದೆ. ಒಂದು ಲೋಟ ನೀರಿನ ಜೊತೆ ಜಜ್ಜಿದ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಬೇಕಾದಲ್ಲಿ ಚಿಟಿಕೆ ಜೇನುತುಪ್ಪ ಇಲ್ಲವಾದಲ್ಲಿ ಬೆಲ್ಲವನ್ನ ಬೆರೆಸಿ ಸೇವಿಸುವುದರಿಂದ ತಕ್ಷಣಕ್ಕೆ ಪರಿಹಾರವಾಗುತ್ತದೆ.